×
Ad

ಪಕ್ಕಲಡ್ಕ: ಕಥುವಾ, ಉನ್ನಾವೋ ಅತ್ಯಾಚಾರ-ಕೊಲೆ ಖಂಡಿಸಿ ಎಸ್ಕೆಎಸ್ ಬಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2018-04-19 22:26 IST

ಮಂಗಳೂರು, ಎ. 19:  ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಉನ್ನಾವೋ , ಸೂರತ್ ಮೊದಲಾದ ಕಡೆಗಳಲ್ಲಿ ನಡೆದಂತಹ ಅತ್ಯಾಚಾರ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬಜಾಲ್ ಪಕ್ಕಲಡ್ಕ ಮದರಸ ಎಸ್ ಕೆ ಎಸ್ ಬಿ ವಿ ವತಿಯಿಂದ ಬುಧವಾರ ಮದರಸ ಪರಿಸರದಲ್ಲಿ ಪ್ರತಿಭಟನೆ ನಡೆಯಿತು.

'ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ' 'ಕೋಮುವಾದ ಅಳಿಯಲಿ ಭಾರತ ದೇಶ ಉಳಿಯಲಿ' 'ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ' ಮುಂತಾದ ನಾಮಫಲಕಗಳನ್ನು ಹಿಡಿದು ಘೋಷಣೆ ಕೂಗಿ ಪ್ರತಿಭಟಿಸಿದರು.

ಸ್ಥಳೀಯ ಖತೀಬ್ ನಝೀರ್ ಅಝ್ಹರಿ ಮಾತನಾಡಿ ಬೇಟಿ ಬಚಾವೋ ಎಂದು ಘೋಷಣೆ ಕೂಗಿದವರಿಂದಲೇ ಬೇಟಿ ಹಟಾವೋ ನಡೆಯುತ್ತಿರುವುದು ಖೇದಕರ ಎಂದರು. ಬರೀ ಎಂಟು ವರ್ಷದ ಮುಗ್ದ ಬಾಲೆಯ ಅತ್ಯಾಚಾರ ಮತ್ತು ಕೊಲೆ ನಡೆಸಿದ ಆರೋಪಿಗಳನ್ನು ಗಲ್ಲಿಗೇರಿಸಬೇಕು ಮತ್ತು ಅದಕ್ಕೆ ಬೆಂಬಲ ನೀಡಿದವರನ್ನು ಕಠಿಣ ಶಿಕ್ಷಗೆ ಒಳಪಡಿಸಬೇಕು ಮತ್ತು ಇಂತಹ ಅನಾಗರಿಕ ಸಂಸ್ಕ್ರತಿಯನ್ನು ಯಾರೂ ಕೂಡ ಕೋಮು ಕಣ್ಣಿನಿಂದ ನೋಡದೆ ಮಾನವಿಯತೆಯ ದೃಷ್ಟಿಯಲ್ಲಿ ನೋಡಬೇಕು ಎಲ್ಲಾ ಜಾತಿ ಧರ್ಮದವರೂ ಖಂಡಿಸಬೇಕು ಎಂದರು.

ಮದರಸ ಸದರ್ ಮುಅಲ್ಲಿಂ ಅನ್ವರ್ ಅಝ್ಹರಿ, ಜಮಾಅತ್ ಅಧ್ಯಕ್ಷ ಅಬೂಬಕರ್ ಹಾಜಿ, ಇಬ್ರಾಹಿಂ ಮುಸ್ಲಿಯಾರ್, ಅಬ್ದುರಹ್ಮಾನ್ ಹಾಜಿ, ಸಾದಿಖ್ ಇಂಜಿನಿಯರ್, ಮುಅದ್ದೀನ್ ಇಬ್ರಾಹಿಂ ಮುಸ್ಲಿಯಾರ್, ಯಾಕೂಬ್ ಬೀಡಿ, ಗುಡ್ಡೆ ಸಮೀರ್, ಯಹ್ಯಾ, ಖಾದರ್ ಇಸ್ಮಾಯಿಲ್, ಫೈರೋಝ್, ಲತೀಫ್ ಜಾಬಿರ್ ಮತ್ತು ಎಸ್ ಕೆ ಎಸ್ ಬಿ ವಿ ಪಧಾದಿಕಾರಿಗಳಾದ ಝಿಯಾದ್, ಹಸನ್, ಸಾಹಿಲ್, ಸುಫಿಯಾನ್, ನಾಝೀಂ, ಆಶಿಸ್, ಸಿನಾನ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News