ಭಾರತದ 19 ಕೋಟಿ ವಯಸ್ಕರಿಗೆ ಬ್ಯಾಂಕ್ ಖಾತೆ ಇಲ್ಲ: ವಿಶ್ವಬ್ಯಾಂಕ್

Update: 2018-04-20 11:48 GMT

ವಾಷಿಂಗ್ಟನ್, ಎ.20: ಎಲ್ಲ ನಾಗರಿಕರು ಬ್ಯಾಂಕ್ ಖಾತೆ ಆರಂಭಿಸುವ ಸಲುವಾಗಿ  ಕೇಂದ್ರಸರಕಾರ ಜನಧನ್ ಯೋಜನೆಯನ್ನು  ಆರಂಭಿಸಿದ್ದರೂ ಭಾರತದಲ್ಲಿ 19 ಕೋಟಿ ವಯಸ್ಕ ನಾಗರಿಕರಿಗೆ ಬ್ಯಾಂಕ್ ಖಾತೆ ಇಲ್ಲ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.

ಚೀನವನ್ನು ಹೊರತುಪಡಿಸಿದರೆ ಬ್ಯಾಂಕ್ ಖಾತೆ ರಹಿತವಾದ ಬಹುದೊಡ್ಡ ಜನಸಂಖ್ಯೆ ಭಾರತದಲ್ಲಿದೆ. ಮೋದಿ ಸರಕಾರ 2014ರ ಆರಂಭಿಸಿದ  ಜನಧನ್ ಯೋಜನೆ ಪ್ರಕಾರ  31 ಕೋಟಿ ಜನರು ಬ್ಯಾಂಕ್ ಖಾತೆ ತೆರೆದಿದ್ದಾರೆ. ಆದರೆ, ಇದರಲ್ಲಿ ಅರ್ಧಾಂಶ ಖಾತೆಗಳಲ್ಲಿ  ವ್ಯವಹಾರ ನಡೆಯುತ್ತಿಲ್ಲ. 2011ಕ್ಕೆ ಹೋಲಿಸಿದರೆ ಬ್ಯಾಂಕ್ ಖಾತೆಗಳ ಸಂಖ್ಯೆಯಲ್ಲಿ 80 ಶೇಕಡ ಹೆಚ್ಚಳವಾಗಿದೆ.

ವಿಶ್ವಬ್ಯಾಂಕ್ ಮತ್ತು ಅಂತರ್ ರಾಷ್ಟ್ರೀಯ ನಾಣ್ಯ ನಿಧಿಯ ವಾರ್ಷಿಕ ಸಭೆಯ ಪ್ರಕಾರ ಜಗತ್ತಿನ ಬ್ಯಾಂಕ್ ರಹಿತ ನಾಗರಿಕರಲ್ಲಿ 11 ಶೇಕಡ ಜನರು ಭಾರತದಲ್ಲಿದ್ದಾರೆ. ಬಯೊಮೆಟ್ರಿಕ್ ದಾಖಲೆಗಳ ಪ್ರಕಾರ ದೇಶದಲ್ಲಿ ಲಿಂಗಾನುಪಾತದ ಅಂತರ ಮತ್ತು ಶ್ರೀಮಂತ ಬಡವರ ನಡುವಿನ ಪರಸ್ಪರ ಅಂತರ ಕಡಿಮೆಯಾಗಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News