ಕುದ್ರೋಳಿ: ಇಮಾಮ್ಸ್ ಕೌನ್ಸಿಲ್‌ನಿಂದ ಪ್ರತಿಭಟನೆ
Update: 2018-04-20 17:51 IST
ಮಂಗಳೂರು, ಎ.20: ಕಥುವಾ ಜಿಲ್ಲೆಯ 8ರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ‘ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲಾ ಸಮಿತಿ’ಯ ವತಿಯಿಂದ ಶುಕ್ರವಾರ ನಗರದ ಕುದ್ರೋಳಿ ಜುಮಾ ಮಸೀದಿಯ ಮುಂದೆ ಪ್ರತಿಭಟನೆ ನಡೆಯಿತು.
ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಕಾರ್ಯದರ್ಶಿ ಜಾಫರ್ ಫೈಝಿ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರು ಮತ್ತು ದಲಿತರು ಅದರಲ್ಲೂ ಮಹಿಳೆಯರು ನಿರಂತರ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಇದರಿಂದ ದೇಶದ ಮಾನ ವಿದೇಶದಲ್ಲಿ ಹರಾಜಾ ಗುತ್ತಿದೆ. ಇದರಿಂದ ಕಸಿವಿಸಿಗೊಂಡಿರುವ ಕೇಂದ್ರ ಸರಕಾರವು ಇಂತಹ ಅಮಾನವೀಯ ಕೃತ್ಯಗಳು ಬೆಳಕಿಗೆ ಬಾರದಂತೆ ತಡೆ ಹಿಡಿಯುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಇಮಾಮ್ಸ್ ಕೌನ್ಸಿಲ್‌ನ ದ.ಕ.ಜಿಲ್ಲಾಧ್ಯಕ್ಷ ಮುಹಮ್ಮದ್ ರಫೀಕ್ ದಾರಿಮಿ, ಅಬ್ದುಲ್ಲಾ ಮುಸ್ಲಿಯಾರ್, ಹಾರಿಸ್ ಹನೀಫಿ ಮತ್ತಿತರರು ಪಾಲ್ಗೊಂಡಿದ್ದರು.