ಕಥುವಾ ಅತ್ಯಾಚಾರ ಪ್ರಕರಣ: ಸಂಪ್ಯದಲ್ಲಿ ಪ್ರತಿಭಟನೆ
ಪುತ್ತೂರು, ಎ. 20: ಕಥುವಾದಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ಸಂಪ್ಯ ಮಸೀದಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸಂಪ್ಯ ಜಮಾಅತ್ ಕಮಿಟಿ ವತಿಯಿಂದ ನಡೆಸಲಾದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಜಮಾತ್ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಬಾಲಕಿ ಅತ್ಯಾಚಾರ ಕೃತ್ಯ ಅತ್ಯಂತ ಘೋರವಾಗಿದ್ದು ಪ್ರತಿಯೊಬ್ಬ ಭಾರತೀಯರೂ ಇದನ್ನು ಖಂಡಿಸಬೇಕಾಗಿದೆ, ಖಂಡಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಅಸ್ತಿತ್ವ ದಲ್ಲಿರುವ ಕೆಲವೊಂದು ಸಂಘಟನೆಯವರು ಇಂಥಹ ಹೀನ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ದೇಶವನ್ನಾಳುವ ಮಂದಿ ದೇಶದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ. ಇಲ್ಲವಾದರೆ ಜನರು ಸ್ವಯಂ ರಕ್ಷಣೆಗೆ ಮುಂದಾಗುವ ಕಾಲ ದೂರವಿಲ್ಲ. ದೇಶದ ಸಂವಿಧಾನವನ್ನು ಗೌರವಿಸುವ ಪ್ರತೀಯೊಬ್ಬರೂ ಅತ್ಯಾಚಾರ ಘಟನೆಯನ್ನು ಖಂಡಿಸಬೇಕಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಜಲೀಲ್ ಸಂಪ್ಯ, ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ, ಸವಾದ್ ಕಲ್ಲರ್ಪೆ, ಯಾಸಿನ್ ಉಸ್ತಾದ್, ಜಮಾತ್ ಕಮಿಟಿ ಸದಸ್ಯರಾದ ಶಿಹಾಬುದ್ದೀನ್ ಸಂಪ್ಯ, ಸಂಶುದ್ದೀನ್ ಸಂಪ್ಯ, ಅಬ್ಬಾಸ್ ಆರ್ಯಾಪು, ಅಬೂಬಕ್ಕರ್ ಕಲ್ಲರ್ಪೆ, ಎಸ್ಕೆಎಸ್ಸೆಸ್ಸಫ್, ಎಸ್ಸೆಸ್ಸೆಫ್ , ನೂರುಲ್ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್, ರಿಫಾಯಿಯ್ಯ್ ದಫ್ ಕಮಿಟಿ, ಹಲ್ಕಾದ್ಸಿಕ್ರ್ ಕಮಿಟಿ, ಸ್ವಲಾತ್ ಕಮಿಟಿ ಪದಾಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಬಶೀರ್ ವಾಗ್ಲೆ ಸ್ವಾಗತಿಸಿ ವಂದಿಸಿದರು.