ಪುತ್ತೂರು ಮತಗಟ್ಟೆಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಕೆ: 46 ಅತಿಸೂಕ್ಷ್ಮ, 6 ಹೆಚ್ಚುವರಿ ಮತದಾನ ಕೇಂದ್ರ
ಪುತ್ತೂರು, ಎ. 20: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ಮತಗಟ್ಟೆ, ಮಹಿಳಾ ಸ್ನೇಹಿ ಮತಗಟ್ಟೆ, ಎಥ್ನಿಕ್ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 217 ಮೂಲ ಮತಗಟ್ಟೆಗಳಿದ್ದು, ಮತದಾರರ ಸಂಖ್ಯೆ ಅಧಿಕವಾಗಿರುವ ಬೂತ್‌ಗಳಲ್ಲಿ ಹೆಚ್ಚುವರಿ ಮತಗಟ್ಟೆ ಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಇಂತಹ 6 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮೂಲ ಮತ್ತು ಹೆಚ್ಚುವರಿ ಸೇರಿ ಒಟ್ಟು 223 ಇವಿಎಂ ಮತಯಂತ್ರಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮತದಾನ ನಡೆಯಲಿದೆ.
ಮಹಿಳಾ ಸ್ನೇಹಿ (ಪಿಂಕ್ ಪೋಲಿಂಗ್ ಸೆಂಟರ್) ಮತಗಟ್ಟೆಯನ್ನಾಗಿ ಕೋಡಿಂಬಾಡಿಯ ದ.ಕ. ಹಿ.ಪ್ರಾ. ಶಾಲೆಯ ಮತಗಟ್ಟೆಯನ್ನು ಗುರುತಿಸಲಾಗಿದೆ. ಈ ಮತಗಟ್ಟೆಯಲ್ಲಿ ಪುರುಷ ಮತದಾರರಿಗಿಂತ (538) ಮಹಿಳಾ ಮತದಾರರು (546) ಹೆಚ್ಚಾಗಿರುವುದರಿಂದ ಮಹಿಳಾ ಸ್ನೇಹಿ ಮತಗಟ್ಟೆಯಾಗಿ ಗುರುತಿಸಲಾಗಿದೆ. ಈ ವಿಶೇಷ ಮತಗಟ್ಟೆಯಲ್ಲಿ ಮಹಿಳಾ ಸಿಬಂದಿಯೇ ಎಲ್ಲಾ ಮತದಾನ ಪ್ರಕ್ರಿಯೆಗಳನ್ನು ನಿರ್ವಹಿಸಲಿದ್ದಾರೆ.
ವಿಧಾನಸಭಾ ಕ್ಷೇತ್ರದಲ್ಲಿ ಎರಡು ಮಾದರಿ ಮತಗಟ್ಟೆಯನ್ನು ತೆರೆಯಲಾಗುತ್ತದೆ. ಕೇಪು ಕುದ್ದುಪದವು ವಸತಿ ಶಾಲೆಯ ಮತಗಟ್ಟೆಯನ್ನು ಈಗಾಗಲೇ ಮಾದರಿ ಮತಗಟ್ಟೆಯಾಗಿ ಗುರುತಿಸಲಾಗಿದ್ದು, ಇನ್ನೊಂದು ಮತಗಟ್ಟೆಯನ್ನು ಗುರುತಿಸಲಾಗುತ್ತದೆ.
ಹಿಂದುಳಿದ ವರ್ಗಗಳ ಮತದಾರರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ವಿಶೇಷವಾಗಿ ಎಥ್ನಿಕ್ ಪೋಲಿಂಗ್ ಸೆಂಟರ್ ತೆರೆಯಲಾಗುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಲ್ನಾಡು ಸ.ಹಿ. ಪ್ರಾ. ಶಾಲಾ ಮತಗಟ್ಟೆಯನ್ನು ಎಥ್ನಿಕ್ ಪೋಲಿಂಗ್ ಸೆಂಟರ್ ಆಗಿ ಗುರುತಿಸಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 46 ಅತಿಸೂಕ್ಷ್ಮ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಕೇಂದ್ರಗಳಿಗೆ ಹೆಚ್ಚಿನ ನಿಗಾ ಇರಿಸಿ ಪಾರದರ್ಶಕ ಹಾಗೂ ಶಾಂತಿಯುತ ಮತದಾನಕ್ಕಾಗಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.
ಉಪ್ಪಿನಂಗಡಿ ಹಿ.ಪ್ರಾ. ಶಾಲೆ, ಬೆಳ್ಳಿಪ್ಪಾಡಿ ಹಿ.ಪ್ರಾ. ಶಾಲೆ (ಪೂರ್ವ ಮತಗಟ್ಟೆ), ಬೆಳ್ಳಿಪ್ಪಾಡಿ ಹಿ.ಪ್ರಾ. ಶಾಲೆ (ದಕ್ಷಿಣ ಮತಗಟ್ಟೆ), ಬೆಳ್ಳಿಪ್ಪಾಡಿ ಹಿ.ಪ್ರಾ. ಶಾಲೆ (ಪಶ್ಚಿಮ ಮತಗಟ್ಟೆ), ಪಡ್ನೂರು ಹಿ.ಪ್ರಾ. ಶಾಲೆ (ಉತ್ತರ ಮತಗಟ್ಟೆ), ನೆಹರೂನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಕಬಕ ಹಿ.ಪ್ರಾ. ಶಾಲೆ (ಪಶ್ಚಿಮ), ಕಬಕ ಹಿ.ಪ್ರಾ. ಶಾಲೆ (ಪೂರ್ವ), ಕಬಕ ಹಿ.ಪ್ರಾ. ಶಾಲೆ (ದಕ್ಷಿಣ), ಮುರ ಹಿ.ಪ್ರಾ. ಶಾಲೆ (ಹಳೆಯ ಕಟ್ಟಡ), ಮುರ ಹಿ.ಪ್ರಾ. ಶಾಲೆ ( ಹೊಸ ಕಟ್ಟಡ), ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆ (ಉತ್ತರ), ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆ (ದಕ್ಷಿಣ), ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆ (ಪೂರ್ವ), ಸಂತ ಫಿಲೋಮಿನಾ ಹಿ.ಪ್ರಾ. ಶಾಲೆ (ಹೊಸ ಕಟ್ಟಡ ಪಶ್ಚಿಮ ಭಾಗ), ಪರ್ಲಡ್ಕ ಹಿ.ಪ್ರಾ. ಶಾಲೆ, ಪರ್ಲಡ್ಕ ಹಿ.ಪ್ರಾ. ಶಾಲೆ (ಪೂರ್ವ), ಪುತ್ತೂರು ನಗರಸಭಾ ಸಮುದಾಯ ಭವನ, ಹಳೆಯ ನಗರಸಭಾ ಕಚೇರಿ, ತಾಲೂಕು ಪಂಚಾಯತ್ ಆಫೀಸ್ ಎಸ್.ಜಿ.ಎಸ್. ವೈ ಸಭಾಂಗಣ, ರಾಗಿದಕುಮೇರು ಹಿ.ಪ್ರಾ. ಶಾಲೆ (ಪೂರ್ವ), ರಾಗಿದಕುಮೇರು ಹಿ.ಪ್ರಾ. ಶಾಲೆ (ಪಶ್ಚಿಮ), ಬೊಳುವಾರು ಹಿ.ಪ್ರಾ. ಶಾಲೆ, ಬೊಳುವಾರು ಹಿ.ಪ್ರಾ. ಶಾಲೆ (ಮೇಲಿನ ಕಟ್ಟಡ), ಹಾರಾಡಿ ಹಿ.ಪ್ರಾ. ಶಾಲೆ (ಕೆಳಗಿನ ಕಟ್ಟಡ), ಹಾರಾಡಿ ಹಿ.ಪ್ರಾ. ಶಾಲೆ (ಕೆಳಗಿನ ಕಟ್ಟಡ ರೂಂ 3), ಹಾರಾಡಿ ಹಿ.ಪ್ರಾ. ಶಾಲೆ (ಮೇಲಿನ ಕಟ್ಟಡ ಪೂರ್ವ), ಹಾರಾಡಿ ಹಿ.ಪ್ರಾ. ಶಾಲೆ (ಕೆಳಗಿನ ಕಟ್ಟಡ ಪೂರ್ವ ರೂಂ 5), ಪುತ್ತೂರು ಸರಕಾರಿ ಪ.ಪೂ. ಕಾಲೇಜು, ನೆಲ್ಲಿಕಟ್ಟೆ ಹಿ.ಪ್ರಾ. ಶಾಲೆ (ಮೇಲಿನ ಕಟ್ಟಡ), ನೆಲ್ಲಿಕಟ್ಟೆ ಹಿ.ಪ್ರಾ. ಶಾಲೆ (ಕೆಳಗಿನ ಕಟ್ಟಡ), ಸಾಮೆತ್ತಡ್ಕ ಹಿ.ಪ್ರಾ. ಶಾಲೆ (ದಕ್ಷಿಣ), ಸಾಮೆತ್ತಡ್ಕ ಹಿ.ಪ್ರಾ. ಶಾಲೆ (ಉತ್ತರ), ಬೀರ್ನಹಿತ್ಲು ಹಿ.,ಪ್ರಾ. ಶಾಲೆ, ನರಿಮೊಗರು ಸ. ಐಟಿಐ (ಪಶ್ಚಿಮ), ನರಿಮೊಗರು ರಾಜೀವ್ ಸೇವಾ ಕೇಂದ್ರ (ಪೂರ್ವ), ನರಿಮೊಗರು ಹಿ.ಪ್ರಾ. ಶಾಲೆ (ಮಧ್ಯ ಭಾಗ), ಮುಕ್ವೆ ಹಿ.ಪ್ರಾ. ಶಾಲೆ (ಪೂರ್ವ), ಮುಕ್ವೆ ಹಿ.ಪ್ರಾ. ಶಾಲೆ (ಪಶ್ಚಿಮ), ಈಶ್ವರಮಂಗಲ ಪಾಳ್ಯತ್ತಡ್ಕ ಪಂಚಲಿಂಗೇಶ್ವರ ಪ್ರೌಢ ಶಾಲೆ, ಈಶ್ವರಮಂಗಲ ಪಾಳ್ಯತ್ತಡ್ಕ ಪಂಚಲಿಂಗೇಶ್ವರ ಶಾಲೆ (ಪೂರ್ವ), ಪಾಳ್ಯತ್ತಡ್ಕ ಗಜಾನನ ಹಿ.ಪ್ರಾ. ಶಾಲೆ (ಪೂರ್ವ), ಪಾಳ್ಯತ್ತಡ್ಕ ಗಜಾನನ ಹಿ.ಪ್ರಾ. ಶಾಲೆ (ಉತ್ತರ), ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಕಚೇರಿ ಮತಗಟ್ಟೆಯನ್ನು ಅತಿ ಸೂಕ್ಷ್ಮ ಮತಗಟ್ಟೆಯಾಗಿ ಗುರುತಿಸಲಾಗಿದೆ.