ದೇರಳಕಟ್ಟೆಯಲ್ಲಿ ಅಲ್ ಇಹ್ಸಾನ್‌ನಿಂದ ಪ್ರತಿಭಟನಾ ಸಭೆ
ಉಳ್ಳಾಲ, ಎ. 20: ಲೋಕಜ್ಞಾನ ಇನ್ನೂ ಪಡೆಯದೆ ಎಂಟು ವರ್ಷ ಪ್ರಾಯದ ಮುಗ್ದ ಬಾಲಕಿ ಮೇಲೆ ದುಷ್ಕರ್ಮಿಗಳು ನಡೆದುಕೊಂಡಿರುವ ರೀತಿ ಅತ್ಯಂತ ಕ್ರೂರ ವರ್ತನೆಯಾಗಿದೆ, ಮನುಷ್ಯ ಎನಿಸಿಕೊಂಡವ ಇಂತಹ ಕೃತ್ಯ ನಡೆಸಲಾರ, ಅವರು ಮನುಷ್ಯರಾಗಿಲು ಸಾಧ್ಯವೇ ಇಲ್ಲ ಎಂದು ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಶರೀಫ್ ಅರ್ಷದಿ ಅಭಿಪ್ರಾಯಪಟ್ಟರು.
ಅಡ್ಕರೆಪಡ್ಪು ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ವತಿಯಿಂದ ಶುಕ್ರವಾರ ದೇರಳಕಟ್ಟೆ ಜಂಕ್ಷನ್‌ನಲ್ಲಿ ಬಾಲಕಿಯ ಹತ್ಯೆಯ ನ್ಯಾಯಕ್ಕಾಗಿ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಪಾನೀರ್ ರಹ್ಮಾನಿಯಾ ಜುಮಾ ಮಸೀದಿಯ ಖತೀಬ್ ಯಾಸರ್ ಅರಾಫತ್ ಕೌಸರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಲೀಂ ದೇಲಿ ಕಾಸರಗೋಡು, ಆದಂ ಫೈಝಿ, ಹಮೀದ್ ಮದನಿ, ದೇರಳಕಟ್ಟೆ ಇರ್ಷಾದುಸ್ಸಿಬಿಯಾನ್ ಗೌರವಾಧ್ಯಕ್ಷ ಬಿ.ಎಂ.ಸತ್ತಾರ್ ಬೆಳ್ಮ, ಅಡ್ಕರೆಪಡ್ಪು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ, ಗಲ್ಫ್ ಸಮಿತಿ ಅಧ್ಯಕ್ಷ ಅಬ್ದುಲ್ ರಹೀಂ ಮೊದಲಾದವರು ಉಪಸ್ಥಿತರಿದ್ದರು.
ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ಅಧ್ಯಕ್ಷ ಸಿರಾಜ್ ಅಡ್ಕರೆಪಡ್ಪು ಕಾರ್ಯಕ್ರಮ ನಿರೂಪಿಸಿದರು.