ಯೆನೆಪೊಯ ಕ್ರೀಡಾಂಗಣದಲ್ಲಿ ಎಐಎಫ್‌ಎಫ್ ವತಿಯಿಂದ ಫುಟ್‌ಬಾಲ್ ತರಬೇತಿ
ಮಂಗಳೂರು, ಎ. 20: ಮಂಗಳೂರು ಫುಟ್ ಬಾಲ್ ಕ್ಲಬ್ ಮೂರು ದಿನಗಳ ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್ ತಳ ಮಟ್ಟದ ನಾಯಕರ ತರಬೇತಿ ಶಿಬಿರವನ್ನು ಎಪ್ರಿಲ್ 13ರಿಂದ 15ರವರೆಗೆ ಯೆನೆಪೋಯ ವಿಶ್ವ ವಿದ್ಯಾನಿಲಯದ ಮೈದಾನದಲ್ಲಿ ನಡೆಯಿತು.
ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್ ಹಮ್ಮಿಕೊಂಡ ಈ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಫುಟ್‌ಬಾಲ್ ಎಸೋಶಿಯೇಶನ್ ದಕ್ಷಿಣ ಕನ್ನಡ ಫುಟ್‌ಬಾಲ್ ಎಸೋಶಿಯೇಶನ್ ಸಹಕಾರ ನೀಡಿದೆ.ಮಂಗಳೂರು ಫುಟ್‌ಬಾಲ್ ಕ್ಲಬ್ ಅಧ್ಯಕ್ಷ ಫರ್ಹಾದ್ ಯೆನೆಪೋಯ ತರಬೇತಿ ಪಡೆದ ಫುಟ್‌ಬಾಲ್ ಪಟುಗಳನ್ನು ಅಭಿನಂದಿಸಿ ಪರಿಸರದಲ್ಲಿ ಫುಟ್‌ಬಾಲ್ ಕ್ರೀಡೆ ಇನ್ನಷ್ಟು ವಿಸ್ತರಿಸಲು ಕಾರಣರಾಗುವಂತೆ ಪ್ರೋತ್ಸಾಹಿಸಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ ಫುಟ್ ಬಾಲ್ ಎಸೊಶಿಯೇಶನ್‌ನ ಕಾರ್ಯದರ್ಶಿ ತರಬೇತಿ ಸಂಘಟಿಸಲು ಶ್ರಮಿಸಿದ ಮತ್ತು ದಕ್ಷಿಣ ಕನ್ನಡದಲ್ಲಿ ಫುಟ್‌ಬಾಲ್ ಪಟುಗಳು ಸೂಕ್ತ ದಾರಿಯಲ್ಲಿ ಸಾಗಲು ರೂಪುಗೊಳ್ಳಲು ಈ ತರಬೇತಿಯ ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರು ಫುಟ್‌ಬಾಲ್ ಕ್ಲಬ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್‌ನ ತರಬೇತುದಾರ ಪ್ರತಿನಿಧಿ ಶೈಲೇಶ್ ಕರ್ಕೇರಾ ಯೆನೆಪೋಯ ಸಂಸ್ಥೆ ಕ್ಯಾಂಪಸ್ ಒದಗಿಸಿಕೊಟ್ಟು ಉತ್ತಮ ರೀತಿಯಲ್ಲಿ ಸಹಕಾರ ನೀಡಿ ತರಬೇತಿಗೆ ಅವಕಾಶ ನೀಡಿರುವುದನ್ನು ಸ್ಮರಿಸಿ ಸಂತೋಷ ವ್ಯಕ್ತಪಡಿಸಿ ಈ ತರಬೇತಿಯಿಂದ ಭವಿಷ್ಯದಲ್ಲಿ ಉತ್ತಮ ಫುಟ್‌ಬಾಲ್ ತಂಡ ರಚನೆ ಮತ್ತು ರಾಷ್ಟ್ರ ಮಟ್ಟದ ಉತ್ತಮ ಫುಟ್‌ಬಾಲ್ ಕ್ರೀಡಾಪಟುಗಳು ಮೂಡಿಬರಲು ಸಹಕಾರಿಯಾಗಲಿದೆ ಎಂದು ಸಮಾರೋಪ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.