ಕಲಾಂ ಓದಿದ ಶಾಲೆಯ ವಿದ್ಯುತ್ ಕಡಿತ !
ರಾಮೇಶ್ವರಂ, ಎ. 20: ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಶಿಕ್ಷಣ ಆರಂಭಿಸಿದ ಶಾಲೆಯಲ್ಲಿ ಎರಡು ದಿನಗಳ ಹಿಂದೆ ವಿದ್ಯುತ್ ಕಡಿತಗೊಳಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಸ್ಥಳೀಯಾಡಳಿತ ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಮಂಡಪಂ ಪಂಚಾಯತ್ ಯೂನಿಯ್ ಮಿಡ್ಲ್ ಸ್ಕೂಲ್ (ನಂ 2)ನ ವಿದ್ಯುತ್ ಪೂರೈಕೆಯನ್ನು ವಿದ್ಯುತ್ ಇಲಾಖೆ ಸ್ಥಗಿತಗೊಳಿಸಿದೆ.
ಕಲಾಂ ಅರು ದಶಕಗಳ ಹಿಂದೆ ಈ ಶಾಲೆಯಲ್ಲಿ ಕಲಿತಿದ್ದರು. ‘‘ಬಾಕಿ ಇರುವ ಶುಲ್ಕವನ್ನು ಕೂಡಲೇ ಪಾವತಿ ಮಾಡಲಾಗುವುದು ಹಾಗೂ ಶುಕ್ರವಾರ ವಿದ್ಯುತ್ ಮರು ಪೂರೈಕೆ ಆಗಲಿದೆ’’ ಎಂದು ಪಂಚಾಯತ್‌ನ ಅಧಿಕಾರಿಗಳು ತಿಳಿಸಿದ್ದಾರೆ. 2011 ಜನವರಿ 11ರಂದು ಕಲಾಂ ಅವರು ಲೈಬ್ರೆರಿ ಹಾಗೂ ಕಂಪ್ಯೂಟರ್ ಸೆಂಟರ್ ಉದ್ಘಾಟಿಸಿದ ಈ ಶಾಲೆಯಲ್ಲಿ ಈಗ ವಿದ್ಯಾರ್ಥಿಗಳು ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸಬೇಕಾಗಿ ಬಂದಿದೆ.
ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಈ ಶಾಲೆಗೆ ವಿದ್ಯುತ್ ಕಡಿತಗೊಳ್ಳುತ್ತಿರುವುದು ಇದು ಎರಡನೇ ಬಾರಿ. ಎರಡು ವರ್ಷಗಳ ಹಿಂದೆ ಕೂಡ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು.