ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ: ಕೆ.ಪಿ ಜಗದೀಶ ಅಧಿಕಾರಿ

Update: 2018-04-20 15:40 GMT

ಮೂಡುಬಿದಿರೆ, ಎ. 20: ಪಕ್ಷಕ್ಕಾಗಿ ನಾನು ದುಡಿದಿದ್ದೇನೆ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಬೇಸರವಾಗಿತ್ತು. ಆಕಾಂಕ್ಷಿಗಳಿಗೆ ಎಲ್ಲರಿಗೂ ಟಿಕೆಟ್ ಸಿಗಲು ಸಾಧ್ಯವಿಲ್ಲ. ರಾಜಕೀಯ ಎನ್ನವುದು ಒಂದು ಗೊಂದಲದ ಗೂಡು. ನನ್ನ ಲೆಕ್ಕಚ್ಚಾರ ತಪ್ಪಾಗಿದೆ ಇಲ್ಲಿ ಅಭ್ಯರ್ಥಿ ಅಥವಾ ವ್ಯಕ್ತಿ ಮುಖ್ಯ ಅಲ್ಲ ಪಕ್ಷವೇ ಮುಖ್ಯ ಎಂದು ಅರಿತಿದ್ದೇನೆ ಆದ್ದರಿಂದ ನನ್ನ ಈ ಹಿಂದಿನ ನಡೆಗೆ ಹಿನ್ನಡೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ ಒಪ್ಪಿಕೊಂಡಿದ್ದಾರೆ.

ಅವರು ಕಳೆದ ಎರಡು ದಿನಗಳ ಹಿಂದೆ ಬೀಗ ಮುದ್ರೆ ಹಾಕಿದ ಬಿಜೆಪಿ ಕಛೇರಿಯನ್ನು ಶುಕ್ರವಾರ ತೆರೆದು ಮುಖಂಡರ ಜತೆ ಸೇರಿ ಅಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಬಿಜೆಪಿ ಅಶಿಸ್ತಿನ ಪಕ್ಷವಲ್ಲ ಗೌರವವನ್ನು ಹೊಂದಿರುವ ಶಿಸ್ತಿನ ಪಕ್ಷ. ಹಲವಾರು ಅಡೆತಡೆಗಳನ್ನೊಳಗೊಂಡು ಅಭಿವೃದ್ಧಿಯ ಪಥದಲ್ಲಿ ನಡೆಯುತ್ತಿದೆ. ಪಕ್ಷದ ಹಿರಿಯರ ಮೇಲೆ ಗೌರವವಿದೆ. ಪಕ್ಷವನ್ನು ಬಿಡುವ ವಿಚಾರವೇ ಇಲ್ಲ. ಇದ್ದಷ್ಟು ದಿನ ಪಕ್ಷದಲ್ಲಿಯೇ ಇದ್ದು ದುಡಿಯುತ್ತನೆ ನನ್ನನ್ನು ನಂಬಿ ಬಂದವರಿಗೆ ತೊಂದರೆಯಾಗಬಾರದು ಈ ನಿಟ್ಟಿನಲ್ಲಿ ತನ್ನನ್ನು 20 ವರ್ಷಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದ ಆತ್ಮೀಯ ಮಿತ್ರ ನಳಿನ್ ಕುಮಾರ್ ಕಟೀಲ್ ಅವರ ರಾಜಿ ಸಂಧಾನದೊಂದಿಗೆ ಮತ್ತೆ ಪಕ್ಷದವರ ಜತೆ ಒಂದಾಗಿದ್ದೇನೆ ಎಂದು ತಿಳಿಸಿದರು.

ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಅಭಯಚಂದ್ರರ ದುರ್ನಡತೆ ಮತ್ತು ಅಭಿವೃದ್ಧಿ ಕೆಲಸಗಳ ಹಿನ್ನಡೆ, ರಾಜ್ಯ ಸರಕಾರದ ವೈಫಲ್ಯ ಹಾಗೂ ಮೋದಿ ಯವರ ಸಕ್ಸ್‌ಸನ್ನು ಜನರ ಮುಂದಿಟ್ಟು ಕಮಲದ ಹೂವನ್ನು ಗೆಲ್ಲಿಸುವುದೇ ನಮ್ಮ ಗುರಿ ಅದಕ್ಕಾಗಿ ಪಕ್ಷದ ಮುಖಂಡರ ಜತೆ ಶ್ರಮಿಸುತ್ತೇನೆ ಎಂದು ಅಧಿಕಾರಿ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ ಕಟೀಲ್, ಪಕ್ಷದ ಅಭ್ಯರ್ಥಿ ಉಮಾನಾಥ ಕೋಟ್ಯಾನ್, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ ಹಾಗೂ ಸುಕೇಶ್ ಶೆಟ್ಟಿ ಶಿರ್ತಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News