ಬೈಂದೂರು ಸಿಪಿಎಂ ಅಭ್ಯರ್ಥಿ ಸುರೇಶ್ ಕಲ್ಲಾಗರ್ ನಾಮಪತ್ರ ಸಲ್ಲಿಕೆ
Update: 2018-04-20 22:06 IST
ಬೈಂದೂರು, ಎ.20: ಬೈಂದೂರು ವಿಧಾನಸಭಾ ಕ್ಷೇತ್ರದ ಸಿಪಿಐಎಂ ಪಕ್ಷದ ಅಭ್ಯರ್ಥಿಯಾಗಿ ಯುವ ಮುಖಂಡ ಸುರೇಶ್ ಕಲ್ಲಾಗರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಬೈಂದೂರಿನಲ್ಲಿರುವ ಪಕ್ಷದ ಚುನಾವಣಾ ಕಚೇರಿಯಿಂದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಸುರೇಶ್ ಕಲ್ಲಾಗರ್ ಸ್ತ್ರೀಶಕ್ತಿ ಕೇಂದ್ರದಲ್ಲಿರುವ ಚುನಾವಣಾ ಕಚೇರಿಯಲ್ಲಿ ನಾಮಪತ್ರ ವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ದಾಸ ಭಂಡಾರಿ, ವೆಂಕಟೇಶ್ ಕೋಣಿ, ಗಣೇಶ್ ತೊಂಡೆ ಮಕ್ಕಿ, ರೋನಾಲ್ಡ್ ರಾಜೇಶ್ ಕ್ವಾಡ್ರಸ್, ರಾಜೀವ ಪಡುಕೋಣೆ, ಎಚ್.ನರ ಸಿಂಹ, ಮಹಾಬಲ ವಡೇರಹೋಬಳಿ, ನಾಗರತ್ನ ನಾಡ, ಜಿ.ಡಿ.ಪಂಜು ಮೊದ ಲಾದವರು ಉಪಸ್ಥಿತರಿದ್ದರು.