ಬೆಳ್ತಂಗಡಿ: ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಪ್ರತಿಭಟನೆ

Update: 2018-04-20 17:46 GMT

ಬೆಳ್ತಂಗಡಿ, ಎ. 20: ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಕಥುವಾದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಬಾಲಕಿಗೆ ನ್ಯಾಯಕ್ಕಾಗಿ ಮತ್ತು ದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ,ದಲಿತ ದೌರ್ಜನ್ಯಗಳ ವಿರುದ್ಧ  ಬೆಳ್ತಂಗಡಿಯ ಡಿಸಿಸಿ ಬ್ಯಾಂಕ್ ಸಮೀಪ ಇಂದು ಪ್ರತಿಭಟನೆ ನಡೆಯಿತು.

ಕಕ್ಕಿಂಜೆ ಜುಮಾ ಮಸೀದಿ ಖತೀಬ್ ಮೂಸ ದಾರಿಮಿ ಉದ್ಘಾಟಿಸಿ, ವಿವಿಧ ಜಾತಿ ಧರ್ಮಗಳ ಸುಂದರ ದೇಶದಲ್ಲಿ ಇಂತಹ ಕೃತ್ಯಗಳು ಖಂಡನೀಯ ಎಂದರು.

ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ಸದಸ್ಯರಾದ ಇಶಾಕ್ ಫೈಝಿ, ಬೆಳ್ತಂಗಡಿ  ಖತೀಬ್ ಹನೀಫ್ ದಾರಿಮಿ, ವಲಯ ಅಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್,  ಬೆಳ್ತಂಗಡಿ ದಲಿತ ನಾಯಕರಾದ ಶೇಕರ್ ಲಾಯಿಲ, ಡಿಐಸಿ ಪ್ರೊಫೆಸರ್ ಇಸ್ಹಾಖ್ ಕೌಸರಿ, ನ್ಯಾಯವಾದಿ ನವಾಝ್ ಕಕ್ಕಿಂಜೆ ಮಾತಾಡಿದರು.

ಕಾರ್ಯಕ್ರಮದಲ್ಲಿ ರಝಾಕ್ ಕನ್ನಡಿಕಟ್ಟೆ , ಶರೀಫ್ ಎಚ್ ಎ, ಇಲ್ಯಾಸ್ ಕಕ್ಕಿಂಜೆ , ಹನೀಫ್ ದೂಮಲಿಕೆ, ಬಶೀರ್ ವಗ್ಗ , ಹನೀಫ್ ಮಜಲು , ಶರೀಫ್ ದೂಮಲಿಕೆ, ಹಕೀಂ ಬಂಗೇರ ಕಟ್ಟೆ , ಸಾದಿಕ್ ಕನ್ನಡಿಕಟ್ಟೆ , ಬೆಳ್ತಂಗಡಿ ಮುಸ್ಲಿಂ ಐಕ್ಯತ ವೇದಿಕೆ ಅದ್ಯಕ್ಷ ಸಲೀಂ ಗುರುವಾಯನಕೆರೆ , ರಝಾಕ್ ಮುಸ್ಲಿಯಾರ್, ಮುಫತೀಶ್ ಹಮೀದ್ ದಾರಿಮಿ , ಅಶ್ರಫ್ ಫೈಝಿ ಪೂಂಜಾಲಕಟ್ಟೆ , ಅಬ್ದುಲ್ಲ ಪೂಂಜಾಲಕಟ್ಟೆ ,ಹಮೀದ್ ದಾರಿಮಿ ಅಳಕೆ, ಅಬ್ಬಾಸ್ ಫೈಝಿ ಕಾಜೂರು, ಡಿಐಸಿ ಹುದವಿ ಬೆಳ್ತಂಗಡಿ, ಹೈದರ್ ಬಿಕೆ, ಮುಹಮ್ಮದ್ ಕುದ್ರಡ್ಕ ಮೊದಲಾದವರು ಉಪಸ್ಥಿತರಿದ್ದರು.

ಶಂಸುದ್ದೀನ್ ದಾರಿಮಿ ಖಂಡನಾ ನಿರ್ಣಯ ಮಂಡಿಸಿದರು. ವಲಯ ಕಾರ್ಯದರ್ಶಿ ಸಿರಾಜ್ ಚಿಲಿಂಬಿ ಸ್ವಾಗತಿಸಿದರು,  ವರ್ಕಿಂಗ್ ಕಾರ್ಯಾದರ್ಶಿ ರಿಯಾಝ್ ಫೈಝಿ ವಂದಿಸಿದರು, ಜಿಲ್ಲಾ ಕಾರ್ಯಾದರ್ಶಿ ಶರೀಫ್ ಕಕ್ಕಿಂಜೆ ನಿರೂಪಿಸಿದರು. ನಂತರ ವಲಯ ನೇತಾರರಿಂದ ಬೆಳ್ತಂಗಡಿ ತಹಶೀಲ್ದಾರರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News