ಬಿ.ಸಿ.ರೋಡ್: ಫಾನ್ಸ್ ಅಕಾಡಮಿ ಶುಭಾರಂಭ

Update: 2018-04-20 17:56 GMT

ಬಿ.ಸಿ.ರೋಡ್, ಎ. 20: ಯುವ ಜನತೆಯು ಸ್ವಾವಲಂಬಿತ ಬದುಕನ್ನು ಕಟ್ಟಿಕೊಳ್ಳಲು ಬೇಕಾದಂತಹ ತರಬೇತಿಯನ್ನು ನೀಡುವ ಉದ್ದೇಶದೊಂದಿಗೆ ಬಿ.ಸಿ ರೋಡಿನ ಕೈಕಂಬದಲ್ಲಿ ಫಾನ್ಸ್ ಅಕಾಡಮಿ ಶುಭಾರಂಭಗೊಂಡಿದೆ.

ತರಬೇತಿ ಕೇಂದ್ರದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ವಿಭಾಗದ ಜಂಟಿ ನಿರ್ದೇಶಕರಾದ ಅರವಿಂದ್ ಬಲೇರಿ ಅವರು ನೆರವೇರಿಸಿದರು.

ಮಂಗಳೂರಿನ ಫಾನ್ಸ್ ಕನ್ಸಲ್ಟೆನ್ಸ್ ಪ್ರೈ. ಲಿ. ಇದರ ಅಂಗ ಸಂಸ್ಥೆಯಾಗಿರುವ ಫಾನ್ಸ್ ಅಕಾಡಮಿಯ ಕಂಪ್ಯೂಟರ್ ಲ್ಯಾಬ್ ಹಾಗೂ ಟೈಲರಿಂಗ್ ಲ್ಯಾಬ್ ಅನ್ನು 'ವಾರ್ತಾಭಾರತಿ' ದಿನಪತ್ರಿಕೆಯ ಮುಖ್ಯ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ ಉದ್ಘಾಟಿಸಿದರು ಮತ್ತು ಕುಂಬೋಳ್ ಸೈಯದ್ ಅಲೀ ತಂಙಳ್ ಅವರು ಆಶೀರ್ವದಿಸಿದರು.

ಫಾನ್ಸ್ ಅಕಾಡಮಿಯಲ್ಲಿ ಫ್ಯಾಷನ್ ಡಿಸೈನಿಂಗ್ ತರಬೇತಿ, ಬ್ಯೂಟಿ ವರ್ಧಿತ ತರಬೇತಿ, ಮೆಹಂದಿ ತರಬೇತಿ, ಟೈಲರಿಂಗ್ ತರಬೇತಿ, ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲಿಷ್ ತರಬೇತಿ, ಸೋಫ್ಟ್ ವೇರ್ ಡೆವಲಪ್ಮೆಂಟ್ ಮತ್ತು ಅಪ್ಲಿಕೇಶನ್ ಡೆವಲಪ್ಮೆಂಟ್ ತರಬೇತಿ, ಕರಾಟೆ, ಯೋಗ, ಕುಂಫುಗಳಂತಹ ಫಿಟ್ನೆಸ್ ತರಬೇತಿ, ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಟ್ಯೂಶನ್ ತರಗತಿಗಳು ಮತ್ತು ಮಕ್ಕಳಿಗೆ ಬೇಸಿಗೆ ಶಿಬಿರದ ಬ್ಯಾಚ್ ಗಳು ಆರಂಭವಾಗಿರುತ್ತದೆ ಎಂದು ಸಂಸ್ಥಾಪಕರಾದ ಮುಹಮ್ಮದ್ ಸಫ್ವಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News