ನಚ್ಚಬೆಟ್ಟು ದಾರುಲ್ ಮುಸ್ತಫಾ: ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ಬುರ್ದಾ ಮಜ್ಲಿಸ್, ಆಧ್ಯಾತ್ಮಿಕ ಸಂಗಮ

Update: 2018-04-21 11:25 GMT

ಉಪ್ಪಿನಂಗಡಿ,ಎ.21: ಕರ್ನಾಟಕ ಸುನ್ನೀ ಜಂ-ಇಯ್ಯತುಲ್ ಉಲಮಾದ ಕಾರ್ಯದರ್ಶಿ ಆಗಿರುವ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರ ಸಾರಥ್ಯದ ಗಡಿಯಾರ, ನಚ್ಚಬೆಟ್ಟುವಿನ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ವಿದ್ಯಾರ್ಥಿ ಸಂಘಟನೆಯಾದ ಇಸ್ತಿಫಾ ಸಾಹಿತ್ಯ ವೇದಿಕೆಯ 18 ನೇ ದರ್ಸ್ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಆಧ್ಯಾತ್ಮಿಕ ಸಂಗಮ ಎ.26 ರಂದು ಗುರುವಾರ ಮಗ್ರಿಬ್ ನಮಾಜಿನ ಬಳಿಕ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ನೇತೃತ್ವವನ್ನು ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಲ್ ಕಿಲ್ಲೂರು ಹಾಗೂ ಅಸ್ಸಯ್ಯದ್ ಹಂಝ ತಂಙಲ್ ಅರ್ರಿಫಾಯಿ ವಹಿಸಲಿದ್ದಾರೆ. ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ನಂತರ ನಡೆಯುವ ಬೃಹತ್ ಬುರ್ದಾ ಮಜ್ಲಿಸ್ ಗೆ ಅಬ್ದುಸ್ಸಮದ್ ಅಮಾಣಿ ಪಟ್ಟವಂ ಕೇರಳ ಹಾಗೂ ಸಂಗಡಿಗರು ನೇತೃತ್ವ ನೀಡಲಿದ್ದಾರೆ. ಈ ವೇಳೆ ಮಾಸ್ಟರ್ ನೂರುಲ್ ಅಮೀನ್ ಕೇರಳ, ಮಾಸ್ಟರ್ ಶಮ್ಮಾಸ್ ಮಂಗಳೂರು, ಮಾಸ್ಟರ್ ಸಲ್ಮಾನ್ ಫಾರೀಸ್ ಉಳ್ಳಾಲ, ಮಾಸ್ಟರ್ ಉವೈಸ್ ಅಮಾನತ್, ಹಾಗೂ ಶುಹೈಬ್ ಜಯನಗರ ನಅತ್ ಆಲಾಪನೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News