×
Ad

ಕುಂದಾಪುರ: ಹಾಲಾಡಿ ವಿರೋಧಿ ಬಣದಿಂದ ಗೌಪ್ಯ ಸಭೆ

Update: 2018-04-21 20:52 IST

ಕುಂದಾಪುರ, ಎ.21: ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವಿರೋಧಿ ಬಣದಿಂದ ಇಂದು ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಅವರ ಕುಂದಾಪುರದ ಮನೆಯಲ್ಲಿ ಗುಪ್ತ ಸಭೆ ನಡೆದಿರುವ ಬಗ್ಗೆ ವರದಿಯಾಗಿದೆ.

ಹಾಲಾಡಿ ವಿರೋಧಿ ಬಣದ ವಿರೋಧದ ನಡುವೆಯೂ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಮೂಲ ಬಿಜೆಪಿಗರೆನಿಸಿಕೊಂಡಿರುವ ಗುಂಪು ಈ ಸಭೆ ನಡೆಸಿದ್ದು, ಇದರಲ್ಲಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಮೂಲಕ ಕುಂದಾಪುರ ಬಿಜೆಪಿ ಯಲ್ಲಿ ಭಿನ್ನಮತ ತೀವ್ರಗೊಂಡಿರುವ ಲಕ್ಷ್ಮಣಗಳು ಕಂಡುಬರುತ್ತಿವೆ.

ಅದಲ್ಲದೆ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಎ.ಜಿ.ಕೊಡ್ಗಿ, ಮಾಜಿ ಶಾಸಕ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೂಡ ಪಾಲ್ಗೊಂಡಿದ್ದು, ಹಾಲಾಡಿ ವಿರೋಧಿ ಬಣದವರು ಅವರೊಂದಿಗೆ ಮುಂದಿನ ನಿರ್ಧಾರದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇವರಲ್ಲಿ ಕೋಟ ಶ್ರೀನಿವಾಸ ಪೂಜಾರಿ ವಿರೋಧಿ ಬಣದಲ್ಲಿರುವ ಭಿನ್ನಮತ ಶಮನಗೊಳಿಸು ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News