ಕಥುವಾ ಪ್ರಕರಣ: ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ಧರಣಿ
ಬ್ರಹ್ಮಾವರ, ಎ.21: ಕಥುವಾ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ಹಾಗೂ ರಂಗನಕೆರೆ ಎಸ್‌ಬಿಎಸ್ ವತಿಯಿಂದ ರಂಗನಕೆರೆ ಮಸೀದಿ ವಠಾರಲ್ಲಿ ಇತ್ತೀಚೆಗೆ ಧರಣಿ ಹಮ್ಮಿಕೊಳ್ಳ ಲಾಗಿತ್ತು.
ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಮಹಮ್ಮದ್ ಇಮ್ತಿಯಾಝ್ ಹೊನ್ನಾಳ, ಗೌರವ ಸಲಹೆಗಾರ ಬಿ.ಎ.ಮಹಮ್ಮದಾಲಿ ಸಹದಿ ಬರುವ ಮಾತನಾಡಿ, ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ನ್ಯಾಯ ಒದಗಿಸಲು ಜಾತಿ, ಧರ್ಮ, ಮತ, ಪಂಗಡ ನೋಡದೆ ಪ್ರಜ್ಞಾವಂತ ನಾಗರಿಕನಾಗಿ ಹೋರಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಂಗನಕೆರೆ ಜಮಾತ್ ಹಿರಿಯ ಸದಸ್ಯ ಅಬ್ದುರ್ರಹ್ಮಾನ್, ಎಚ್.ಹಸನ್, ಬ್ರಹ್ಮಾವರ ಸೆಕ್ಟರ್ ಕೋಶಾಧಿಕಾರಿ ಸುಲೈಮಾನ್, ರಂಗನಕೆರೆ ಶಾಖಾಧ್ಯಕ್ಷ ಶಂಶುದ್ದೀನ್, ಬಾಲ ಸಂಘ ವಿದ್ಯಾರ್ಥಿ ನಾಯಕ ಅಲ್ಪಾಝ್, ಝಯಾನ್ ಭದ್ರಗಿರಿ, ಡಿವಿಷನ್ ಕೋಶಾಧಿಕಾರಿ ಇಬ್ರಾಹಿಂ ರಂಗನಕೆರೆ, ರಂಗನಕೆರೆ ಮಸೀದಿಯ ಇಬ್ರಾಹಿಂ ಮದನಿ, ಮುತ್ತಲಿಬ್, ಅಬ್ದುರ್ರಹ್ಮಾನ್, ಸೆಕ್ಟರ್ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಉಪಸ್ಥಿತರಿದ್ದರು.