ಎ. 22: ಕಥುವಾ ಅತ್ಯಾಚಾರ, ಹತ್ಯೆ ಖಂಡಿಸಿ ಅಮೆಮಾರ್ ನಲ್ಲಿ ಧರಣಿ

Update: 2018-04-21 17:57 GMT

ಫರಂಗಿಪೇಟೆ, ಎ. 21:  ಕಥುವಾದಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ, ಹತ್ಯೆ ಮತ್ತು ಉತ್ತರ ಪ್ರದೇಶ ಉನ್ನಾವೋದಲ್ಲಿ 14 ರ ಬಾಲಕಿಯ ಅತ್ಯಾಚಾರ ಹಾಗೂ ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳದ ವಿರುದ್ಧ ಬದ್ರಿಯಾ ಜುಮಾ ಮಸೀದಿ ಮತ್ತು ಮದರಸ ಅಮೆಮಾರ್ ಇದರ ಆಡಳಿತ ಸಮಿತಿ ವತಿಯಿಂದ ಅಮೆಮಾರ್ ವಾರ್ಡಿನ ಪುದು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಮತ್ತು ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ  ಎ 22 ರಂದು ಸಂಜೆ 7:15ಕ್ಕೆ ಅಮೆಮಾರ್ ಜಂಕ್ಷನ್ ನಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News