ತೈವಾನ್ ಜಲಸಂಧಿಯಲ್ಲಿ ಚೀನಾ ಸಮರಾಭ್ಯಾಸ

Update: 2018-04-21 17:59 GMT
ಸಾಂದರ್ಭಿಕ ಚಿತ್ರ

ಶಾಂಘೈ, ಎ. 21: ಚೀನಾದ ನೌಕಾಪಡೆಯು ತೈವಾನ್‌ನ ದಕ್ಷಿಣದಲ್ಲಿರುವ ಜಲಸಂಧಿಯ ಮೂಲಕ ಶುಕ್ರವಾರ ಹಾದು ಹೋಯಿತು ಹಾಗೂ ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಯುದ್ಧಾಭ್ಯಾಸಗಳನ್ನು ನಡೆಸಿತು.

ಚೀನಾದ ಈ ಸೇನಾ ಕಸರತ್ತುಗಳ ಬಗ್ಗೆ ಸ್ವಯಂ ಆಡಳಿತ ಹೊಂದಿರುವ ತೈವಾನ್ ಈಗಾಗಲೇ ಆಕ್ಷೇಪಣೆ ಎತ್ತಿದೆ ಹಾಗೂ ಇದು ತೈವಾನ್‌ಗೆ ಒಡ್ಡಿದ ಬೆದರಿಕೆಯಾಗಿದೆ ಎಂದು ಬಣ್ಣಿಸಿದೆ.

ಚೀನಾದ ವಿಮಾನವಾಹಕ ಯುದ್ಧನೌಕೆ ‘ಲಿಯವೊನಿಂಗ್’ನಿಂದ ಜೆ-15 ಯುದ್ಧ ವಿಮಾನಗಳು ಹಾರಾಟ ನಡೆಸಿದವು ಹಾಗೂ ಬಶಿ ಜಲಸಂಧಿಯ ಪೂರ್ವದಲ್ಲಿ ತರಬೇತಿ ನಡೆಸಿದವು. ಈ ಜಲಸಂಧಿಯು ತೈವಾನ್ ಮತ್ತು ಫಿಲಿಪ್ಪೀನ್ಸ್ ನಡುವೆ ಹರಿಯುತ್ತಿದೆ.

ಚೀನಾದ ಯುದ್ಧ ನೌಕೆಗಳು ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ದಾಳಿ ಮತ್ತು ದಾಳಿಯನ್ನು ಎದುರಿಸುವ ಕಸರತ್ತುಗಳನ್ನು ನಡೆಸಿದವು ಎಂದು ‘ಪೀಪಲ್ಸ್ ಲಿಬರೇಶನ್ ಆರ್ಮಿ’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News