×
Ad

ರಾಜ್ಯಮಟ್ಟದ ದಫ್ ಸ್ಪರ್ಧೆ: ಕೈಕಂಬ ತಂಡಕ್ಕೆ ಪ್ರಶಸ್ತಿ

Update: 2018-04-22 20:34 IST

ಉಡುಪಿ, ಎ.22: ಆತ್ರಾಡಿ ಅನ್ಸಾರುಲ್ ಮಸಾಕೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ 4ನೇ ವಾರ್ಷಿಕೋತ್ಸವದ ಅಂಗವಾಗಿ ಆತ್ರಾಡಿ ಮಸೀದಿ ವಠಾರದಲ್ಲಿ ಶನಿವಾರ ಆಯೋಜಿಸಲಾದ ರಾಜ್ಯಮಟ್ಟದ ದಫ್ ಸ್ಫರ್ಧೆಯಲ್ಲಿ ಬಿ.ಸಿ.ರೋಡ್ ಕೈಕಂಬ ರಿಫಾಯಿಯ ದಫ್ ಅಸೋಸಿಯೇಶನ್ ಪ್ರಥಮ ಬಹುಮಾನ ಗೆದ್ದುಕೊಂಡಿದೆ.

ಪರ್ಲಡ್ಕ ಪುತ್ತುರುನ ಹಯಾತುಲ್ ಇಸ್ಲಾಂ ದಫ್ ಸಮಿತಿ ದ್ವಿತೀಯ ಸ್ಥಾನ ಪಡೆದುಕೊಂಡರೆ, ತೃತೀಯ ಸ್ಥಾನಕ್ಕಾಗಿ ಶಿರ್ವ ಅಲ್ ಅಮೀನ್ ದಫ್ ಸಮಿತಿ ಹಾಗೂ ಮಣಿಪುರ ಖಲಂದರ್ ಷಾ ದಫ್ ಸಮಿತಿ ತಂಡಗಳು ಸಮಾನ ಅಂಕ ಪಡೆದಿದ್ದು, ಅದೃಷ್ಟ ಚೀಟಿ ತೆಗೆಯುವ ಮೂಲಕ ಮಣಿಪುರ ತಂಡವನ್ನು ತೃತೀಯ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 16 ಧಪ್ ತಂಡಗಳು ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News