ಕಾಂಗ್ರೆಸ್ ನ ಜನಪರ ಕಾರ್ಯದಿಂದ ರಾಜ್ಯಾದ್ಯಂತ ಪಕ್ಷ ಗೆಲ್ಲಲಿದೆ: ಯು.ಟಿ.ಖಾದರ್

Update: 2018-05-06 09:11 GMT

ಉಳ್ಳಾಲ, ಎ. 23: ಯುಪಿಎ ಸರಕಾರದ ಅವಧಿಯಲ್ಲಿ ಇದ್ದಂತಹ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಜನರಿಗೆ ತೊಂದರೆಯಾಗಿರಲಿಲ್ಲ. ಕೇಂದ್ರದಲ್ಲಿ ಎನ್‌ಡಿಎ ಸರಕಾರದ ಅವಧಿಯಲ್ಲಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುವ ಮೂಲಕ ಜನರಿಗೆ ಬದುಕಲು ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಸರಕಾರ 94 ಸಿಸಿ ಸರಳೀಕರಣ, ಹಕ್ಕುಪತ್ರ ವಿತರಣೆ, ರೇಷನ್ ಕಾರ್ಡು ವಿತರಣೆಯಂತಹ ಜನಪರ ಕಾರ್ಯವನ್ನು ಕೈಗೊಂಡಿದೆ. ಇದನ್ನು ಜನ ಗಮನ ದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಪಕ್ಷವನ್ನು ಗೆಲ್ಲಿಸಲಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಲಿದ್ದಾರೆ ಎಂದು ಎಂದು ಮಂಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಹೇಳಿದರು.

ಅವರು ತೊಕ್ಕೊಟ್ಟು ಅಂಬಿಕಾ ರೋಡಿನಲ್ಲಿ ಸೋಮವಾರ ನಾಮಪತ್ರ ಸಲ್ಲಿಸುವ ಪ್ರಯುಕ್ತ ಜರಗಿದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಾತಿ, ಧರ್ಮ, ಪಕ್ಷವನ್ನು ಕೇಳದೆ ಮನೆ ಬಾಗಿಲಿಗೆ ಬಂದವರ ಕೆಲಸವನ್ನು ತಾರತಮ್ಯವಿಲ್ಲದೆ ನಿರ್ವಹಿಸಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ ಪ್ರಚಾರ ನಡೆಸುವವರಿಗೆ ಕೆಲಸದ ಮೂಲಕ ಉತ್ತರ ನೀಡಿದ್ದೇನೆ ಎಂದು ಹೇಳಿದರು. ಇದೇ ಸಂದರ್ಭ ತಲಪಾಡಿ ಗ್ರಾಮ ಪಂಚಾಯತಿನ ಬಿಜೆಪಿಯಿಂದ ಆಯ್ಕೆಯಾಗಿದ್ದ, ಮಾಜಿ ಅಧ್ಯಕ್ಷ ಜಯರಾಜ್ ಸಾಲ್ಯಾನ್ ಕಾಂಗ್ರೆಸ್ ಸೇರ್ಪಡೆಗೊಂಡರು.

ಮುಖಂಡರುಗಳಾದ ಯು. ಕಣಚೂರು ಮೋನು, ರಾಜಶೇಖರ ಕೋಟ್ಯಾನ್, ಮುಹಮ್ಮದ್ ಮೋನು, ಈಶ್ವರ ಉಳ್ಳಾಲ್, ಪ್ರಶಾಂತ ಕಾಜವ, ಸಂತೋಷ್ ಶೆಟ್ಟಿ ಅಸೈಗೋಳಿ, ಸದಾಶಿವ ಉಳ್ಳಾಲ, ಎನ್.ಎಸ್. ಕರೀಂ, ದಿನೇಶ್ ಕುಂಪಲ, ಉಸ್ಮಾನ್ ಕಲ್ಲಾಪು, ಯು.ಕೆ. ಮೋನು, ಇಬ್ರಾಹಿಂ ಕೋಡಿಜಾಲ್, ಗಣೇಶ್ ಶೆಟ್ಟಿ ತಲಪಾಡಿ, ಆಲ್ವಿನ್ ಡಿಸೋಜ, ಚಂದ್ರಹಾಸ್ ಕರ್ಕೇರ, ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News