ಮದ್ರಸ ಅಧ್ಯಾಪಕರಿಂದ ಮುಂದುವರಿದ ಸ್ವಚ್ಛತಾ ಅಭಿಯಾನ

Update: 2018-04-24 12:24 GMT

ಮಂಗಳೂರು: ಎ.24: ಮದ್ರಸ ಅಧ್ಯಾಪಕರು ಆರಂಭಿಸಿರುವ ಸ್ವಚ್ಛತಾ ಅಭಿಯಾನ ಮುಂದುವರಿದಿದ್ದು, ಸಮಸ್ತ ಮಂಗಳೂರು ರೇಂಜ್ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್(ಟಿಆರ್‌ಎಫ್)ನ ಸಹಯೋಗದಲ್ಲಿ ಬೋಳಾರ ಪರಿಸರದಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್‌ನ ಮಂಗಳೂರು ರೇಂಜ್‌ಗೊಳಪಟ್ಟ ವಿವಿಧ ಮದ್ರಸಗಳ 40 ಅಧ್ಯಾಪಕರು ಮತ್ತು ಟಿಆರ್‌ಎಫ್ ಕಾರ್ಯಕರ್ತರು ಬೋಳಾರ ಪರಿಸರದ ರಸ್ತೆಬದಿಯಲ್ಲಿದ್ದ ಕಸಕಡ್ಡಿಗಳನ್ನು ಹೆಕ್ಕಿದರು ಹಾಗೂ ಬಸ್ ನಿಲ್ದಾಣವನ್ನು ಗುಡಿಸಿ ಶುಚಿಗೊಳಿಸಿದರು.

ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾ ಅಧ್ಯಕ್ಷ ಹಾಗೂ ಮಂಗಳೂರು ರೇಂಜ್ ಕಾರ್ಯದರ್ಶಿ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಸಮಸ್ತ ಮುದರ್ರಿಬ್ ಸಯ್ಯದ್ ಉಮರುಲ್ ಫಾರೂಖ್ ತಂಙಳ್, ಸಮಸ್ತ ಮುಫತ್ತಿಶ್, ಉಮರ್ ದಾರಿಮಿ ಸಾಲ್ಮರ, ಮಂಗಳೂರು ರೇಂಜ್ ಅಧ್ಯಕ್ಷ ಅಬ್ದುಲ್ ರಹಿಮಾನ್ ದಾರಿಮಿ ಜೋಕಟ್ಟೆ, ಉಪಾಧ್ಯಕ್ಷ ನಝೀರ್ ಅಝ್‌ಹರಿ, ಪರೀಕ್ಷಾ ಬೋರ್ಡ್ ಅಧ್ಯಕ್ಷ ಅಲಿ ಫೈಝಿ, ಬೋಳಾರ ಮಸೀದಿ ಖತೀಬ್ ಇಲ್ಯಾಸ್ ಬಾಖವಿ, ನಾಸಿರ್ ಕೌಸರಿ ಮತ್ತು ಮಂಗಳೂರು ರೇಂಜ್‌ನ ವಿವಿಧ ಮದ್ರಸಗಳ ಸದರ್ ಮುಅಲ್ಲಿಮರು ಮತ್ತು ಮುಅಲ್ಲಿಮರು ಭಾಗವಹಿಸಿದ್ದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಅಧ್ಯಕ್ಷ ರಿಯಾಝ್ ಕಣ್ಣೂರು, ಸಲಹೆಗಾರರಾದ ರಫೀಕ್ ಮಾಸ್ಟರ್, ಅಬ್ದುಸ್ಸಲಾಂ ಮುಸ್ಲಿಯಾರ್ ಪೆರ್ನೆ, ಸದಸ್ಯರಾದ ಮಜೀದ್ ತುಂಬೆ, ಅಸ್ಫರ್ ಹುಸೈನ್, ನಕಾಶ್ ಬಾಂಬಿಲ, ಮಾಸ್ಟರ್ ಮುಹಮ್ಮದ್ ಫಹಾದ್ ಮತ್ತು ಉದ್ಯಮಿ ಹುಸೈನ್ ಬೋಳಾರ್ ಭಾಗವಹಿಸಿದ್ದರು.


ಇದೊಂದು ಮಾದರಿ ಕಾರ್ಯಕ್ರಮ. ಇದೇ ರೀತಿ ಸದರ್ ಉಸ್ತಾದರ ನೇತೃತ್ವದಲ್ಲಿ ಮುಅಲ್ಲಿಮರು, ಊರ ಯುವಕರು, ಜಮಾಅತರು ಮತ್ತು ಮದ್ರಸ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶುಕ್ರವಾರ ಮಸೀದಿ, ಮದ್ರಸ ಪರಿಸರ ಮಾತ್ರವಲ್ಲದೆ ಇಡೀ ಊರನ್ನೇ ಸ್ವಚ್ಛ ಮಾಡುವ ಕಾರ್ಯಕ್ರಮಗಳು ಆಗಾಗ ನಡೆಯಬೇಕು. ಆ ಮೂಲಕ ನಮ್ಮ ಮೊಹಲ್ಲಾವನ್ನು ಸ್ವಚ್ಛ ಹಾಗೂ ಸುಂದರ ಪರಿಸರವಾಗಿಸಬಹುದು.

                      -ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ
                      ಅಧ್ಯಕ್ಷರು, ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್. ದ.ಕ ಜಿಲ್ಲೆ ಹಾಗೂ ಕಾರ್ಯದರ್ಶಿ, ಮಂಗಳೂರು ರೇಂಜ್.


ನಿಶ್ಚಯವಾಗಿಯೂ ಅಲ್ಲಾಹನು ಪಶ್ಚಾತ್ತಾಪಿಗಳನ್ನು ಇಷ್ಟಪಡುತ್ತಾನೆ. ಶುದ್ಧಿಯುಳ್ಳವರನ್ನೂ ಇಷ್ಟಪಡುತ್ತಾನೆ’’ ಎಂಬ ಅಲ್ಲಾಹನ ವಚನದಿಂದ ಸ್ವಚ್ಛತೆಗೆ ಎಷ್ಟೊಂದು ಮಹತ್ವವಿದೆ ಎಂದು ಅರಿವಾಗುತ್ತದೆ. ಮದ್ರಸ ಅಧ್ಯಾಪಕರು ನಡೆಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿ ಹಾಗೂ ನಮ್ಮ ಪರಿಸರ ಸ್ವಚ್ಛವಾಗಿಡುವಲ್ಲಿ ನಾವೂ ಕೈ ಜೋಡಿಸೋಣ.

                    -ಸಯ್ಯದ್ ಉಮರುಲ್ ಫಾರೂಖ್ ತಂಙಳ್,
                    ಸಮಸ್ತ ಮುದರ್ರಿಬ್ (ತರಬೇತುದಾರರು) 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News