ಗಾಂಜಾ ಸೇವನೆ: ಐವರು ಆರೋಪಿಗಳು ವಶಕ್ಕೆ
Update: 2018-04-24 19:06 IST
ಮಣಿಪಾಲ, ಎ.24: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಐವರನ್ನು ಮಣಿಪಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಹೆರ್ಗಾ ಗ್ರಾಮದ ಸರಳಬೆಟ್ಟು ಎಂಬಲ್ಲಿ ಕಟಪಾಡಿ ಶಂಕರಪುರದ ವಿಶ್ವನಾಥ ರಮೇಶ್ ಶೆಟ್ಟಿ(28) ಹಾಗೂ ಪೂನಾದ ಸ್ವನಾಂದ ದರೂರ್(21) ಎಂಬವರನ್ನು ಮತ್ತು ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿ ಚಿಕ್ಕಮಗಳೂರಿನ ಸೃಜನ್ ಅಮೀನ್(20), ಬ್ರಹ್ಮಗಿರಿಯ ಅನಿಶ್ ಅಮೀನ್(20), ಅಜ್ಜರಕಾಡಿನ ಗೌತಮ್(19) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.