ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎ.25ರಿಂದ ಸಿಟಿಬಸ್ ಪ್ರಯಾಣ ದರ ಏರಿಕೆ

Update: 2018-04-24 14:42 GMT

ಮಂಗಳೂರು, ಎ. 24: ಡೀಸೆಲ್ ದರ ನಿರಂತರವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎ.25ರಿಂದ ದ.ಕ. ಜಿಲ್ಲೆಯ ಎಲ್ಲಾ ಸಿಟಿ ಬಸ್ಸುಗಳ ಪ್ರಯಾಣ ದರವನ್ನು 1 ರೂ.ನಷ್ಟು ಏರಿಕೆ ಮಾಡಲಾಗಿದೆ ಎಂದು ದ.ಕ. ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಡೀಸೆಲ್ ದರ ನಿರಂತರ ಏರಿಕೆಯಾಗುತ್ತಿದ್ದು, ಉಳಿದಂತೆ ಬಿಡಿ ಭಾಗಗಳು, ಆಯಿಲ್, ಟಯರ್, ಚಾಸಿಸ್ ದರ, ಬಾಡಿ ಬಿಲ್ಡಿಂಗ್, ಇನ್ಶೂರೆನ್ಸ್, ಪ್ರೀಮಿಯಂ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಬಸ್ಸು ನಿರ್ವಹಣಾ ದರ ಗಗನ್ನೇರುತ್ತಿದೆ. ಬಸ್ಸು ನಿರ್ವಹಣಾ ವೆಚ್ಚದಲ್ಲಿ ಆಗುವ ನಷ್ಟವನ್ನು ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯ ಎಂದವರು ತಿಳಿಸಿದ್ದಾರೆ.

ದ.ಕ. ಬಸ್ಸು ಮಾಲಕರ ಸಂಘದ ವತಿಯಿಂದ ಎಲ್ಲಾ ಸಿಟಿ ಬಸ್ಸುಗಳಲ್ಲಿ 1ನೆ ತರಗತಿಯಿಂದ 7ನೆ ತರಗತಿವರೆಗಿನ ಮಕ್ಕಳಿಗೆ ಪ್ರಯಾಣ ದರದಲ್ಲಿ ಶೇ.75 ರಿಯಾಯತಿ, ಅದೇರೀತಿ 8ನೆ ತರಗತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಶೇ.60 ರಿಯಾಯತಿ ಪ್ರಯಾಣ ದರವನ್ನು ಎಂದಿನಂತೆ ಮುಂದುವರಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News