‘ಮ್ಯಾಕ್ಸ್ ಫ್ಯಾಶನ್’ನಲ್ಲಿ ಸಿದ್ಧ ಉಡುಪುಗಳ ಅನಾವರಣ

Update: 2018-04-24 14:51 GMT

ಮಂಗಳೂರು, ಎ.24: ನಗರದ ಪಾಂಡೇಶ್ವರದ ಫಿಝಾ ಪೋರಂ ಮಾಲ್‌ನಲ್ಲಿರುವ ದೇಶದ ಬೃಹತ್ ಕೌಟುಂಬಿಕ ಉಡುಪುಗಳ ಮಳಿಗೆಯಾದ ‘ಮ್ಯಾಕ್ಸ್ ಫ್ಯಾಶನ್’ನಲ್ಲಿ ಬೇಸಿಗೆ ಕಾಲದ ಸಿದ್ಧ ಉಡುಪುಗಳ ಅನಾವರಣ ಕಾರ್ಯಕ್ರಮವು ಶನಿವಾರ ಜರುಗಿತು.

ಚಿತ್ರನಟ ಹಾಗೂ ರೇಡಿಯೋ ಜಾಕಿ ರೂಪೇಶ್ ಶೆಟ್ಟಿ ಸಿದ್ಧ ಉಡುಪುಗಳನ್ನು ಅನಾವರಣ ಮಾಡಿದರು. ಬಳಿಕ ಮಾತನಾಡಿದ ಅವರು, ಯುವ ಜನಾಂಗ ಫ್ಯಾಶನ್‌ಗೆ ಮನಸೋಲುತ್ತಿದೆ. ತಾನು ಮ್ಯಾಕ್ಸಿ ಫ್ಯಾಶನ್‌ನ ಗ್ರಾಹಕನಾಗಿದ್ದು, ಇಲ್ಲಿ ಅತ್ಯುತ್ತಮ ವಿನ್ಯಾಸದ, ಆಕರ್ಷಕ ಉಡುಪುಗಳು ಲಭ್ಯವಿವೆ. ಬೇಸಿಗೆ ಕಾಲದಲ್ಲೂ ಕೂಡಾ ಕುಟುಂಬದ ಸದಸ್ಯರು ಜೊತೆಗೂಡಿಕೊಂಡು ಬಂದು ಶಾಪಿಂಗ್ ಮಾಡುವ ತಾಣ ಇದಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಚಿತ್ರನಟಿ ಅನಿತಾ ಸಾಗರ್ ಇಲ್ಲಿ ಬೇಸಿಗೆ ಕಾಲದಲ್ಲಿ ಮಾತ್ರವಲ್ಲ, ಎಲ್ಲಾ ಋತುವಿಗೂ ಅನ್ವಯವಾಗುವಂತಹ ಉಡುಪುಗಳು ಲಭ್ಯವಿದೆ ಎಂದರು.

ಮಂಗಳೂರು ಮಳಿಗೆಯ ವ್ಯವಸ್ಥಾಪಕ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

*ಬೇಸಿಗೆ ಕಾಲಕ್ಕೆ ಮಕ್ಕಳು, ಹಿರಿಯರ ಸಹಿತ ಎಲ್ಲರಿಗೂ ಒಪ್ಪಿಗೆಯಾಗಬಲ್ಲ ಮತ್ತು ಹೊಂದಾಣಿಕೆಯಾಗಬಲ್ಲ ಹಾಗೂ ದೇಹಕ್ಕೆ ಒಪ್ಪುವಂತಹ ವಿವಿಧ ವಿನ್ಯಾಸ, ಬಣ್ಣದ ಉಡುಪುಗಳು ಇಲ್ಲಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News