ಚುನಾವಣೆ: ಉಡುಪಿಯಲ್ಲಿ ಕೊನೆಯ ದಿನ 29 ನಾಮಪತ್ರಗಳ ಸಲ್ಲಿಕೆ

Update: 2018-04-24 15:48 GMT

ಉಡುಪಿ, ಎ.24: ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 18 ಅ್ಯರ್ಥಿಗಳು ಒಟ್ಟು 29 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಸಲ್ಲಿಕೆಯಾದ ನಾಮಪತ್ರಗಳ ವಿವರ:

118. ಬೈಂದೂರು ವಿಧಾನಸಭಾ ಕ್ಷೇತ್ರ: ಮದನ (ಕಾಂಗ್ರೆಸ್) 3 ನಾಮಪತ್ರಗಳು, ಎಚ್.ಸುರೇಶ್ ಪೂಜಾರಿ (ಪಕ್ಷೇತರ) 2 ನಾಮಪತ್ರ, ಸುಬ್ರಹ್ಮಣ್ಯ ಬಿ.( ಪಕ್ಷೇತರ), ಮರಕಾಲ ಮಂಜುನಾಥ ಬಸವ (ಪಕ್ಷೇತರ), ಬಿ.ಎಂ. ಸುಕುಮಾರ ಶೆಟ್ಟಿ(ಬಿಜೆಪಿ) 2 ನಾಮಪತ್ರ ಸೇರಿದಂತೆ ಇಂದು ಒಟ್ಟು ಐವರು ಅ್ಯರ್ಥಿಗಳು 9 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

 119.ಕುಂದಾಪುರ ಕ್ಷೇತ್ರ:ರಾಜೀವ ಕೋಟ್ಯಾನ್ (ಸಂಯುಕ್ತ ಜನತಾದಳ), ರಾಕೇಶ್ ಮಲ್ಲಿ (ಕಾಂಗ್ರೆಸ್), ವಿಕಾಸ್ ಹೆಗ್ಡೆ (ಪಕ್ಷೇತರ) ಒಟ್ಟು ಮೂವರು ಅ್ಯರ್ಥಿಗಳು 3 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

120.ಉಡುಪಿ ಕ್ಷೇತ್ರ: ಮಧುಕರ ಮುದ್ರಾಡಿ (ಶಿವಸೇನೆ) 2 ನಾಮಪತ್ರ, ವೈ.ಎಸ್. ವಿಶ್ವನಾಥ್ (ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ) 4 ನಾಮಪತ್ರ, ಮಹೇಶ (ಪಕ್ಷೇತರ) 2 ನಾಮಪತ್ರ ಸೇರಿದಂತೆ ಒಟ್ಟು ಮೂವರು ಅ್ಯರ್ಥಿಗಳು 8 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

121.ಕಾಪು ಕ್ಷೇತ್ರ:ಅಬ್ದುರ್ರಹ್ಮಾನ್(ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ), ಮನ್ಸೂರ್ ಇಬ್ರಾಹೀಂ (ಜೆಡಿಎಸ್) 2 ನಾಮಪತ್ರ ಸೇರಿದಂತೆ ಒಟ್ಟು ಇಬ್ಬರು ಅ್ಯರ್ಥಿಗಳು 3 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

 122. ಕಾರ್ಕಳ ಕ್ಷೇತ್ರ: ಸೈಯದ್ ಆರಿಫ್ (ಪಕ್ಷೇತರ), ಮಕ್ಸೂದ್ ಅಹ್ಮದ್(ಆಲ್‌ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ), ಗೋಪಾಲ ಭಂಡಾರಿ (ಕಾಂಗ್ರೆಸ್) 2 ನಾಮಪತ್ರ, ಮುಹಮ್ಮದ್ ಶರೀಫ್ (ಪಕ್ಷೇತರ), ಅಬ್ದುಲ್ ಅಝೀಝ್ (ಪಕ್ಷೇತರ) ಸೇರಿದಂತೆ ಒಟ್ಟು ಐವರು ಅ್ಯರ್ಥಿಗಳು 6 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಎ.25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಎ.27 ಕೊನೆಯ ದಿನವಾಗಿದೆ. ಅದೇ ದಿನ ಸ್ಪರ್ಧೆಯ ಸ್ಪಷ್ಟ ಚಿತ್ರಣ ಹೊರಹೊಮ್ಮಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News