ಎ.25ರಿಂದ ಯಕ್ಷಗಾನ ಮೂಲಕ ಮತದಾನ ಜಾಗೃತಿ

Update: 2018-04-24 15:51 GMT

ಉಡುಪಿ, ಎ.24: ಜಿಲ್ಲೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಕಳೆದ ವಿಧಾನಸಬಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳನ್ನು ಗುರುತಿಸಿ ಜಿಲ್ಲೆಯ ಜನಪ್ರಿಯ ಕಲೆಯಾದ ಯಕ್ಷಗಾನದ ಮೂಲಕ ಜನರನ್ನು ಮತದಾನ ಮಾಡುವಂತೆ ಪ್ರೇರೇಪಿಸಲು ಎ.25ರಿಂದ ಯಕ್ಷಗಾನ ‘ಮತ ಮಹಿಮಾಮೃತ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಎ.25ರಂದು ಅಪರಾಹ್ನ 3:15ಕ್ಕೆ ಪಡುಬಿದ್ರೆ ಪೇಟೆಯಲ್ಲಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಬಳಿಕ 4:20ಕ್ಕೆ ಕಾಪುವಿನಲ್ಲಿ, 5:15ಕ್ಕೆ ಕಟಪಾಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಪರಾಹ್ನ 2 ಗಂಟೆಗೆ ಸ್ವೀಪ್ ಸಮಿತಿಯಿಂದ ಯುಪಿಸಿಎಲ್‌ನ ಸಿಬ್ಬಂದಿಗೆ ಮತದಾನ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ ನಡೆಯಲಿದೆ. ಮತದಾನ ಜಾಗೃತಿ ಕಾರ್ಯಕ್ರಮವನ್ನು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಉದ್ಘಾಟಿಸುವರು. ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News