18 ವರ್ಷದೊಳಗಿನ ಸಂತ್ರಸ್ತರ ಹೆಸರು, ಗುರುತು ಬಹಿರಂಗಪಡಿಸುವುದು ಅಪರಾಧ: ಜಿಲ್ಲಾಧಿಕಾರಿ

Update: 2018-04-24 16:00 GMT

ಮಂಗಳೂರು, ಎ.24: ಜಮ್ಮು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದನ್ನು ಜಿಲ್ಲಾದ್ಯಂತ ಖಂಡಿಸಿ ಸಂತ್ರಸ್ತ ಬಾಲಕಿಯ ಹೆಸರು ಮತ್ತು ಭಾವಚಿತ್ರವನ್ನು ಸಾಮಾಜಿಕ ಜಾಲತಾಣ, ವಾಟ್ಸ್‌ಆ್ಯಪ್, ಮಾಧ್ಯಮಗಳಲ್ಲಿ, ಫ್ಲೆಕ್ಸ್, ಬ್ಯಾನರ್ ಮೂಲಕ ಪ್ರದರ್ಶಿಸಿರುವುದನ್ನು ಗಮನಿಸಲಾಗುತ್ತಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ ಕಾಯ್ದೆ) 2012 ರ ಸೆಕ್ಷನ್ 23(2) ರ ಪ್ರಕಾರ ಹಾಗೂ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 74 ರ ಪ್ರಕಾರ 18 ವರ್ಷದೊಳಗಿನ ಸಂತ್ರಸ್ತ ಮಕ್ಕಳ ಹೆಸರು ಮತ್ತು ಗುರುತನ್ನು ಬಹಿರಂಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದುದರಿಂದ ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವುದು ಈಗಾಗಲೇ ಹಾಕಲಾಗಿರುವ ಸಂತ್ರಸ್ತ ಬಾಲಕಿಯ ಹೆಸರು ಮತ್ತು ಭಾವಚಿತ್ರ ಇರುವ ಫ್ಲ್ಲೆಕ್ಸ್ ಮತ್ತು ಹೋರ್ಡಿಂಗ್ಸ್‌ನ್ನು ಕೂಡಲೇ ತೆರವುಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News