ಉಡುಪಿ: ಚುನಾವಣಾ ಸುದ್ದಿಗಳ ಮೇಲೆ ‘ಹದ್ದಿನ ಕಣ್ಣು’

Update: 2018-04-24 16:06 GMT

ಉಡುಪಿ, ಎ.24: ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀಡಿಯಾ ಮಾನಿಟರಿಂಗ್ ಮತ್ತು ಮೀಡಿಯಾ ಸರ್ಟಿಫಿಕೇಶನ್ ಕೇಂದ್ರವನ್ನು ತೆರೆಯಲಾಗಿದ್ದು, ಚುನಾವಣಾ ಸುದ್ದಿಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರ, ಮುದ್ರಣ ಮಾಧ್ಯಮ ಮತ್ತು ಸ್ಥಳೀಯ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ವೀಕ್ಷಿಸುವ ಜೊತೆಗೆ ಸ್ಥಳೀಯ ವಾಹಿನಿಗಳ ಕಾರ್ಯಕ್ರಮಗಳನ್ನು ರೆಕಾರ್ಡ್ ಸಹ ಮಾಡಲಾಗುತ್ತಿದೆ. ಸ್ಥಳೀಯ ಕೇಬಲ್ ಚಾನೆಲ್‌ಗಳಲ್ಲಿ ಜಾಹೀರಾತುಗಳಿಗೆ ಪೂರ್ವಾನುಮತಿ ಅಗತ್ಯವಾಗಿದೆ ಎಂದು ಎಂಸಿಎಂಸಿಯ ನೋಡಲ್ ಅಧಿಕಾರಿ ಜನಾರ್ದನ್ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳನ್ನು ದಾಖಲಿಸಿ ಸಂಬಂಧಪಟ್ಟ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಕ್ಷೇತ್ರ ಚುನಾವಣಾಧಿಕಾರಿ (ಆರ್‌ಒ) ಸಂಬಂಧ ಪಟ್ಟ ಅ್ಯರ್ಥಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವರು.

ಸುದ್ದಿಗಳ ಮೇಲೆ ನಿಗಾ ಇಡಲು ಶಿಪ್ಟ್‌ಗಳನ್ನು ಮಾಡಲಾಗಿದ್ದು, ವಿವಿಧ ಇಲಾಖೆಯ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. ಸಂದೇಶ್, ರೋಹಿತ್, ವೆಂಕಟೇಶ್, ಮಧು, ಶೋಲಿನ್ ಪಿ.ಡಿ.ಕೋಸ್ತಾ, ಡಿ.ಆರ್. ಗಿರೀಶ್, ಚೇತನ್, ಸಂತೋಷ್, ಯಶಸ್ವಿ, ಕಿಶೋರ್ ಆರ್. ಇವರಿಗೆ ಚಾನೆಲ್‌ಗಳನ್ನು ವೀಕ್ಷಿಸುವ ಕಾರ್ಯಬಾರವನ್ನು ಹಂಚಲಾಗಿದೆ.

ಅಶೋಕ್ ಹೆಬ್ಬಾರ್ ಹಾಗೂ ಲತಾ ದೈನಿಕಗಳನ್ನು ಸಂಪೂರ್ಣವಾಗಿ ಓದಿ ಜಾಹೀರಾತು ಹಾಗೂ ಸಕಾರಾತ್ಮಾಕ, ನಕರಾತ್ಮಕ ಮತ್ತು ಚುನಾವಣಾ ಸುದ್ದಿಗಳ ಬಗ್ಗೆ ಸಮಿತಿಯ ಗಮನಸೆಳೆಯುವರು. ಪ್ರತಿಯೊಬ್ಬರಿಗೂ ಕಾರ್ಯಭಾರವನ್ನು ಹಂಚಿಕೆ ಮಾಡಲಾಗಿದ್ದು, ಪಾವತಿ ಸುದ್ದಿಗಳು ಗಮನಕ್ಕೆ ಬಂದರೆ ಪ್ರತಿದಿನ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಂಸಿಎಂಸಿ ಸಭೆ ನಡೆಯುವುದು. ಸಭೆಯ ತೀರ್ಮಾನವನ್ನು ಸಂಬಂಧಪಟ್ಟ ಆರ್‌ಒಗಳಿಗೆ ತಿಳಿಸಲಾಗುವುದು. ಕಟ್ಟುನಿಟ್ಟಾಗಿ, ನೀತಿಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯತತ್ಪರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News