24 ನಕಲಿ ವಿವಿಗಳ ಪಟ್ಟಿ ಬಿಡುಗಡೆ

Update: 2018-04-24 17:03 GMT

ಹೊಸದಿಲ್ಲಿ, ಎ.24: ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ 24 ಸ್ವಘೋಷಿತ, ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ) ಬಿಡುಗಡೆಗೊಳಿಸಿದೆ. ಇದರಲ್ಲಿ 8 ದಿಲ್ಲಿಯಲ್ಲಿದೆ.

 ದೇಶದಾದ್ಯಂತ ಯುಜಿಸಿ ಕಾಯ್ದೆ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿರುವ 24 ಸ್ವಘೋಷಿತ ಹಾಗೂ ಮಾನ್ಯತೆರಹಿತ 24 ನಕಲಿ ವಿವಿಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಈ ವಿವಿಗಳು ನೀಡುವ ಪದವಿಗಳಿಗೆ ಮಾನ್ಯತೆಯಿಲ್ಲ ಎಂದು ಯುಜಿಸಿಯ ನೋಟಿಸ್ ತಿಳಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕ, ಬಿಹಾರ, ಕೇರಳ, ನಾಗಪುರ, ಕಾನ್ಪುರ, ಮಥುರಾ, ಪ್ರತಾಪ್‌ಗಢ, ಒಡಿಶಾ, ಆಲಿಗಢ, ಪಾಂಡಿಚೇರಿಯ ತಲಾ ಒಂದು ವಿವಿ ಹಾಗೂ ಅಲಹಾಬಾದ್‌ನಲ್ಲಿರುವ ಎರಡು ವಿವಿಗಳು ಸೇರಿವೆ. ದಿಲ್ಲಿಯ ಕಮರ್ಷಿಯಲ್ ವಿವಿ, ಯುನೈಟೆಡ್ ನೇಷನ್ಸ್ ವಿವಿ, ವೊಕೇಷನಲ್ ವಿವಿ, ಎಡಿಆರ್-ಸೆಂಟ್ರಿಕ್ ಜುಡಿಷಿಯಲ್ ವಿವಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈಯನ್ಸ್ ಆ್ಯಂಡ್ ಇಂಜಿನಿಯರಿಂಗ್, ವಿಶ್ವಕರ್ಮ ಓಪನ್ ವಿವಿ ಫಾರ್ ಸೆಲ್ಫ್ ಎಂಪ್ಲಾಯ್‌ಮೆಂಟ್, ಆಧ್ಯಾತ್ಮಿಕ ವಿವಿ ಹಾಗೂ ವಾರಣಾಸಿಯ ಸಂಸ್ಕೃತ್ ವಿವಿ- ಇವು ನಕಲಿ ವಿವಿಗಳ ಪಟ್ಟಿಯಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News