ಅಮೆರಿಕ ರಾಜತಾಂತ್ರಿಕ ಪಾಕ್ ಬಿಟ್ಟು ಹೋಗುವಂತಿಲ್ಲ

Update: 2018-04-24 17:58 GMT

ಇಸ್ಲಾಮಾಬಾದ್, ಎ. 24: ಇಸ್ಲಾಮಾಬಾದ್‌ನಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತವೊಂದರಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಅಪಘಾತಕ್ಕೆ ಕಾರಣನಾಗಿರುವ ಅಮೆರಿಕದ ರಾಜತಾಂತ್ರಿಕನು ದೇಶ ಬಿಟ್ಟು ಹೋಗುವಂತಿಲ್ಲ ಎಂದು ಪಾಕಿಸ್ತಾನ ಸರಕಾರ ಮಂಗಳವಾರ ಹೇಳಿದೆ.

ಅದೇ ವೇಳೆ, ಈ ರಾಜತಾಂತ್ರಿಕನನ್ನು ಬಂಧಿಸುವುದು ಹಾಗೂ ವಿಚಾರಣೆಗೆ ಗುರಿಪಡಿಸುವುದೂ ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಅಮೆರಿಕದ ರಾಯಭಾರ ಕಚೇರಿಯಲ್ಲಿ ಸೇನಾ ರಾಜತಾಂತ್ರಿಕನಾಗಿರುವ ಕರ್ನಲ್ ಜೋಸೆಫ್ ಹಾಲ್, ರಸ್ತೆಯೊಂದರಲ್ಲಿ ಕೆಂಪು ದೀಪವನ್ನು ಉಲ್ಲಂಘಿಸಿ ತನ್ನ ಅಧಿಕೃತ ವಾಹನದಲ್ಲಿ ಮುಂದುವರಿದಾಗ ಬೈಕೊಂದಕ್ಕೆ ಢಿಕ್ಕಿ ಹೊಡೆದಿತ್ತು. ಆಗ ಬೈಕ್ ಸವಾರ ಮೃತಪಟ್ಟಿದ್ದರು.

ಈ ವಿಷಯವನ್ನು ಪಾಕಿಸ್ತಾನದ ಉಪ ಅಟಾರ್ನಿ ಜನರಲ್ ರಜಾ ಖಾಲಿದ್ ಇಸ್ಲಾಮಾಬಾದ್ ಹೈಕೋರ್ಟ್‌ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News