ಲಾಹೋರ್‌ನಲ್ಲಿ ಪಾಕಿಸ್ತಾನಿಯನ್ನು ವಿವಾಹವಾದ ಭಾರತೀಯ ಮಹಿಳೆ: ವೀಸಾ 6 ತಿಂಗಳು ವಿಸ್ತರಣೆ

Update: 2018-04-24 18:03 GMT

ಇಸ್ಲಾಮಾಬಾದ್, ಎ. 24: ಲಾಹೋರ್‌ಗೆ ಭೇಟಿ ನೀಡಿದ ವೇಳೆ ಇಸ್ಲಾಮ್‌ಗೆ ಮತಾಂತರ ಹೊಂದಿ ಪಾಕಿಸ್ತಾನಿ ವ್ಯಕ್ತಿಯೋರ್ವನನ್ನು ವಿವಾಹವಾದ ಭಾರತೀಯ ಮಹಿಳೆ ಕಿರಣ್ ಬಾಲಾ ಅವರ ವೀಸಾ ಅವಧಿಯನ್ನು ಆರು ತಿಂಗಳು ವಿಸ್ತರಿಸಲಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಬೈಸಾಖಿ ಹಬ್ಬದಲ್ಲಿ ಭಾಗವಹಿಸುವುದಕ್ಕಾಗಿ ಲಾಹೋರ್‌ಗೆ ತೆರಳಲು ಕಿರಣ್ ಬಾಲಾಗೆ ಎಪ್ರಿಲ್ 12ರಿಂದ 21ರವರೆಗೆ ವಾಯಿದೆಯುಳ್ಳ ಪಾಕಿಸ್ತಾನಿ ವೀಸಾವನ್ನು ನೀಡಲಾಗಿತ್ತು.

ಲಾಹೋರ್‌ನಲ್ಲಿರುವಾಗ ಅವರು ಇಸ್ಲಾಮ್‌ಗೆ ಮತಾಂತರ ಹೊಂದಿ ತನ್ನ ಹೆಸರನ್ನು ಅಮ್ನಾ ಬೀಬಿ ಎಂಬುದಾಗಿ ಬದಲಾಯಿಸಿದ್ದಾರೆ. ಬಳಿಕ ಅವರು ಮುಹಮ್ಮದ್ ಅಝಮ್ ಎಂಬ ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಅವರಿಬ್ಬರು ಪರಸ್ಪರ ಪರಿಚಿತರಾಗಿದ್ದರು ಎನ್ನಲಾಗಿದೆ.

ತಾನಿನ್ನು ಭಾರತಕ್ಕೆ ಹಿಂದಿರುಗುವುದಿಲ್ಲ ಎಂಬುದಾಗಿ ಮದುವೆಯ ಬಳಿಕ ಕಿರಣ್ ಬಾಲಾ ಹೇಳಿದ್ದಾರೆ.

‘‘ಪಾಕಿಸ್ತಾನಿ ಪೌರತ್ವ ಪಡೆಯುವ ಬಗ್ಗೆಯೂ ನಾನು ಆಶಾವಾದಿಯಾಗಿದ್ದೇನೆ’’ ಎಂದು ಸ್ಥಳೀಯ ಮಾಧ್ಯಮದ ಜೊತೆ ಮಾತನಾಡಿದ ಕಿರಣ್ ಬಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News