ಬಿ.ಸಿ.ರೋಡ್: 33 ಲಕ್ಷ ರೂ. ಮೌಲ್ಯದ ಅಕ್ರಮ ಮರಳು ದಾಸ್ತಾನು ವಶ

Update: 2018-04-24 18:09 GMT

ಬಂಟ್ವಾಳ, ಎ.24: ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮರಳು ಖರೀದಿಸಿ ದಾಸ್ತಾನು ಇರಿಸಿದ್ದನ್ನು ಪತ್ತೆ ಹಚ್ಚಿರುವ ಪೊಲೀಸರು ಅದನ್ನು ವಶಪಡಿಸಿಕೊಂಡ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.

ಬಿ.ಸಿ.ರೋಡಿನ ನೇತ್ರಾವತಿ ಸೇತುವೆಯ ಬಳಿ ಖಾಸಗಿ ಕಂಪೆನಿಯು ಅಕ್ರಮವಾಗಿ ಸುಮಾರು 33 ಲಕ್ಷ ರೂ. ಮೌಲ್ಯದ ಮರಳು ಖರೀದಿಸಿ ದಾಸ್ತಾನು ಮಾಡಿದ್ದರೆನ್ನಲಾಗಿದೆ. ಇದನ್ನು ಬಂಟ್ವಾಳ ಪೋಲೀಸರು ತನಿಖೆ ನಡೆಸಿ ವಶಪಡಿಸಿಕೊಂಡಿದ್ದು, ಭೂ ಮತ್ತು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.

ಸಕಲೇಶಪುರ ಬಿ.ಸಿ.ರೋಡ್ ವರೆಗೆ ನಡೆಯುವ ಚತುಷ್ಪತ ಕಾಮಗಾರಿಯನ್ನು ನಡೆಸಲು ಗುತ್ತಿಗೆ ವಹಿಸಿಕೊಂಡಿರುವ ಎಲ್.ಎನ್.ಟಿ. ಕಂಪನಿಯು ಬಿ.ಸಿ.ರೋಡಿನ ಪಾಣೆಮಂಗಳೂರಿನಲ್ಲಿ ಬಾಡಿಗೆಗೆ ಪಡೆದ ಜಾಗದಲ್ಲಿ ಸುಮಾರು ಎರಡು ಸಾವಿರ ಲೊಡ್ ಮರಳನ್ನು ಅಕ್ರಮವಾಗಿ ಖರೀದಿಸಿ ಅಕ್ರಮವಾಗಿ ದಾಸ್ತಾನು ಮಾಡಿತ್ತು ಎನ್ನಲಾಗಿದೆ. ಇದರಲ್ಲಿ 1,100 ಲೋಡ್ ಮರಳು ಸ್ಥಳದಲ್ಲಿ ದಾಸ್ತಾನು ಇರಿಸಿದ್ದು, ಉಳಿದ ಮರಳನ್ನು ಬಳಕೆ ಮಾಡಿದೆ. ಅಕ್ರಮ ಮರಳು ದಾಸ್ತಾನು ಮಾಡಿದ ಕಂಪನಿಯ ವಿರುದ್ಧ ಮುಂದಿನ ಪ್ರಕರಣ ದಾಖಲಿಸಲು ಭೂ ಮತ್ತು ಗಣಿ ಇಲಾಖೆ ಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಎಸ್ಪಿ ರವಿಕಾಂತೇ ಗೌಡ ಮಾರ್ಗದರ್ಶನದಲ್ಲಿ ಪ್ರೊಬೇಶನರಿ ಐಪಿಎಸ್  ಅಕ್ಷಯ್ ಎಂ. ಹಾಕೆ,  ನಗರ ಠಾಣಾ ಎಸ್ಸೈ ಚಂದ್ರಶೇಖರ್ ಗ್ರಾಮಾಂತರ ಎಸ್ಸೈ ಪ್ರಸನ್ನ, ಅಪರಾಧ ವಿಭಾಗದ ಎಸ್ಸೈ. ಹರೀಶ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News