ನಾಮಪತ್ರಗಳ ಪರಿಶೀಲನೆ: ಪುತ್ತೂರಿನಲ್ಲಿ 2 ತಿರಸ್ಕೃತ, 1 ಹಿಂಪಡೆತ
ಪುತ್ತೂರು, ಎ.25: ಬುಧವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಸಲ್ಲಿಕೆಯಾಗಿದ್ದ 15 ನಾಮಪತ್ರಗಳ ಪೈಕಿ 2 ತಿರಸತಗೊಂಡಿದೆ. ಇದಲ್ಲದೆ ಬಿಜೆಪಿ ಅ್ಯರ್ಥಿ ಸಂಜೀವ ಮಠಂದೂರು ಸಲ್ಲಿಸಿರುವ 2 ಸೆಟ್ ನಾಮಪತ್ರಗಳ ಪೈಕಿ ಒಂದನ್ನು ಮಾತ್ರ ಪರಿಗಣಿಸಿದರಿಂದ ಸದ್ಯ 12 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಎ.27ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಸಹಾಯಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಬುಧವಾರ ಪುತ್ತೂರು ಮಿನಿವಿಧಾನಸೌಧದ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಿದರು.
ಬಿಜೆಪಿಯಿಂದ ಹೆಚ್ಚುವರಿ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಹೇರಳೆ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಕಲ್ಲೇಗ ಸಲ್ಲಿಸಿದ್ದ 2 ನಾಮಪತ್ರಗಳು ತಿರಸ್ಕೃತಗೊಂಡಿವೆ. ಈ ನಡುವೆ ಅಶ್ರಫ್ ಕಲ್ಲೇಗ ಪಕ್ಷೇತರರಾಗಿ ಸಲ್ಲಿಸಿರುವ ಉಮೇದುವಾರಿಕೆಗೆ ಯಾವುದೇ ತೊಡಕಾಗಿಲ್ಲ.
ಎ.23ರಂದು ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ, ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು(2 ನಾಮಪತ್ರ), ಸ್ವತಂತ್ರ ತುಳುನಾಡ್ ಪಕ್ಷದ ವಿದ್ಯಾಶ್ರೆ, ಪ್ರಜಾ ಪರಿವರ್ತನಾ ಪಕ್ಷದಿಂದ ಶೇಖರ್ ಮಾಡಾವು, ಪಕ್ಷೇತರ ಅ್ಯರ್ಥಿ ಅಮರನಾಥ ನಾಮಪತ್ರ ಸಲ್ಲಿಸಿದ್ದರು.
ಎ.24ರಂದು ಜೆಡಿಎಸ್ ಅ್ಯರ್ಥಿ ಐ.ಸಿ. ಕೈಲಾಸ್, ಜೆಡಿಯುನಿಂದ ಮಜೀದ್ ಎನ್.ಕೆ., ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ (ಎಂಇಪಿ)ಯ ಶಬನಾ ಎಸ್. ಶೇಖ್, ಸಾಮಾನ್ಯ ಜನತಾ ಪಕ್ಷದ ಎಂ.ಎಸ್.ರಾವ್, ಪಕ್ಷೇತರ ಅ್ಯರ್ಥಿಗಳಾಗಿ ಚೇತನ್, ಬಶೀರ್ ಬೂಡಿಯಾರ್, ಅಶ್ರಫ್ ಕಲ್ಲೇಗ ನಾಮಪತ್ರ ಸ್ವೀಕೃತಿಯಾಗಿವೆ.