ಕಥುವಾ ಪ್ರಕರಣ: ಪಿಎಫ್‌ಐ ಮಲಾರ್ ಘಟಕದಿಂದ ಪ್ರತಿಭಟನೆ

Update: 2018-04-25 12:59 GMT

ಮಂಗಳೂರು, ಎ.25: ಜಮ್ಮುವಿನ ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಪಿಎಫ್‌ಐ ಮಲಾರ್ ಘಟಕದ ವತಿಯಿಂದ ಮಲಾರ್ ಪದವು ಜಂಕ್ಷನ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಮುಹಮ್ಮದ್ ಯು.ಬಿ.ಉಳ್ಳಾಲ್, ಪಿಎಫ್‌ಐ ಮುಖಂಡ ಝಾಹಿದ್ ಮಲಾರ್, ಸ್ಥಳೀಯ ಮಸೀದಿಯ ಖತೀಬ್ ರಿಯಾಝ್ ಫೈಝಿ ಕೃತ್ಯವನ್ನು ಖಂಡಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಪಿಎಫ್‌ಐ ಮಲಾರ್ ಘಟಕದ ಮುಖಂಡ ನಾಸಿರ್ ಮಲಾರ್, ಸಮೀರ್ ಟಿಪ್ಪು ನಗರ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News