ಕಥುವಾ ಪ್ರಕರಣ: ಇನೋಳಿಯಲ್ಲಿ ಎಸ್ಸೆಸ್ಸೆಫ್‌ನಿಂದ ಪ್ರತಿಭಟನೆ

Update: 2018-04-25 12:59 GMT

ಮಂಗಳೂರು, ಎ.25: ಜಮ್ಮುವಿನ ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಎಸೆಸ್ಸೆಫ್ ಇನೋಳಿ ಶಾಖೆಯ ವತಿಯಿಂದ ಎ. ಸೈಟ್ ಮಸೀದಿ ವಠಾರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಕೆಸಿಎಫ್ ಯು.ಎ.ಇ. ಕಾರ್ಯಕರ್ತ ಫಾರೂಕ್ ಸಅದಿ ಇನೋಳಿ, ಮಂಜನಾಡಿ ದಅವಾ ಕಾಲೇಜು ವಿದ್ಯಾರ್ಥಿ ನೌಫಲ್ ಮಲಾರ್, ಲೇಖಕ ಇಸಾಕ್ ಫಜೀರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಇನೋಳಿ ಶಾಖಾಧ್ಯಕ್ಷ ಅಲ್ಹಾಜ್ ಅಲ್ತಾಫ್ ಫಾಳಿಲಿ, ಕಾರ್ಯದರ್ಶಿ ಯಾಕೂಬ್, ಎಸ್‌ವೈಎಸ್ ಇನೋಳಿ ಬ್ರಾಂಚ್ ಅಧ್ಯಕ್ಷ ಹೈದರಲಿ ಸಖಾಫಿ, ಇನೋಳಿ ಜಮಾಅತ್ ಗ್ರೂಪ್ ಕಾರ್ಯಕರ್ತ ಹಾರಿಸ್, ಅಮೀರ್ ಕಡವು, ಲತೀಫ್ ನಂದಾವರ, ಅಬ್ದುಸ್ಸಮದ್ ಮುಕ್ರಿ, ಇಕ್ಬಾಲ್ ಕಕ್ಕೆಬೆಟ್ಟು,ಕೆಸಿಎಫ್ ರಿಯಾದ್ ಕಾರ್ಯಕರ್ತ ಫಾರೂಕ್ ಉಪಸ್ಥಿತರಿದ್ದರು.

ಮುಹಮ್ಮದ್ ಝೈನುದ್ದೀನ್ ಸ್ವಾಗತಿಸಿದರು. ಮುಝಮ್ಮಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News