ಕಥುವಾ ಪ್ರಕರಣ: ಕೆ.ಸಿ.ರೋಡ್‌ನಲ್ಲಿ ಎಸ್ಸೆಸ್ಸೆಫ್‌ನಿಂದ ಪ್ರತಿಭಟನೆ

Update: 2018-04-25 13:13 GMT

ಮಂಗಳೂರು, ಎ.25: ಜಮ್ಮುವಿನ ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಕೃತ್ಯವನ್ನು ಖಂಡಿಸಿ ಎಸ್‌ವೈಎಸ್ ಕೆ.ಸಿ. ರೋಡ್ ಸೆಂಟರ್, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಹಾಗೂ ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ವತಿಯಿಂದ ಕೆ.ಸಿ.ರೋಡ್‌ನಲ್ಲಿ ಪ್ರತಿಭಟನೆ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ನಾಯಕ ಹಾಫಿಳ್ ಯಾಕೂಬ್ ಸಅದಿ, ಅಸ್ಸಯದ್ ಆಬಿದ್ ತಂಙಳ್, ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಉಮರ್ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ಫಾರೂಕ್‌ಬಟ್ಟಪ್ಪಾಡಿ, ಕೋಶಾಧಿಕಾರಿ ಉಸ್ಮಾನ್ ಪಲ್ಲ, ಎಸ್‌ಜೆಎಂ ತಲಪಾಡಿ ರೇಂಜ್ ಅಧ್ಯಕ್ಷ ಮುಹಮ್ಮದ್ ಮದನಿ ಉಸ್ತಾದ್, ಅಬ್ಬಾಸ್ ಕೊಳಂಗರೆ, ಅಬ್ಬಾಸ್ ಕೊಮರಂಗಳ, ಬಿ.ಎಚ್.ಇಸ್ಮಾಯೀಲ್, ಅಹ್ಮದ್ ಕುಂಞಿ ಹಾಜಿ ಪಿಲಿಕೂರ್, ಅಬ್ಬಾಸ್ ಪೆರಿಬೈಲ್, ಅಬ್ಬಾಸ್ ಕೊಪ್ಪಳ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯೀಲ್ ಕೆ.ಸಿ. ನಗರ, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ ಉಪಸ್ಥಿತರಿದ್ದರು.

ಮುಸ್ತಫ ಝಹುರಿ ಸ್ವಾಗತಿಸಿದರು. ಅನ್ವೀಝ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News