×
Ad

ಮಂಗಳೂರು: ‘ಟೊಯೊಟಾ ಯಾರಿಸ್’ ನೂತನ ಕಾರು ಮಾರುಕಟ್ಟೆಗೆ ಬಿಡುಗಡೆ

Update: 2018-04-25 19:22 IST

ಮಂಗಳೂರು, ಎ.25: ಪ್ರತಿಷ್ಠಿತ ಟೊಯೊಟಾ ಸಂಸ್ಥೆಯು ನೂತನವಾಗಿ ಹೊರತಂದ ‘ಟೊಯೊಟಾ ಯಾರಿಸ್’ ಕಾರನ್ನು ಬುಧವಾರ ನಗರದ ಪಡೀಲ್‌ನಲ್ಲಿರುವ ಯುನೈಟೆಡ್ ಟೊಯೊಟಾ ಶೋರೂಂನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಚಿತ್ರನಟಿ-ರೂಪದರ್ಶಿ ಜೊಸಿಟಾ ಅನೊಲಾ ರಾಡ್ರಿಗಸ್ ‘ಟೊಯೊಟಾ ಯಾರಿಸ್’ ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮುಖ್ಯಅತಿಥಿಯಾಗಿ ಐಎಂಎ ಮಂಗಳೂರು ಶಾಖೆಯ ಅಧ್ಯಕ್ಷ ಡಾ.ಕೆ.ಆರ್.ಕಾಮತ್, ಶೋರೂಂನ ಚೇರ್‌ಮೆನ್ ಆರೂರು ಪ್ರಭಾಕರ ರಾವ್, ಹಣಕಾಸು ನಿರ್ದೇಶಕ ಆರೂರು ಪ್ರಕಾಶ್ ರಾವ್, ಮ್ಯಾನೇಜರ್ ಆರೂರು ಗಣೇಶ್ ರಾವ್, ಮಾರುಕಟ್ಟೆ ನಿರ್ದೇಶಕ ಆರೂರು ರಾಮ್‌ಗೋಪಾಲ್ ರಾವ್, ನಿರ್ದೇಶಕರಾದ ಆರೂರು ವರುಣ್ ರಾವ್, ಆರೂರು ವಿಕ್ರಮ್ ರಾವ್, ಸರ್ವೀಸ್ ಮ್ಯಾನೇಜರ್ ಮೆಲ್ವಿನ್ ೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.

ಡಾ.ಕೆ.ಆರ್.ಕಾಮತ್ ಮತ್ತು ಜೊಸಿಟಾ ಅನೊಲಾ ರಾಡ್ರಿಗಸ್ ಮಾತನಾಡಿ, ನೂತನ ಕಾರಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಶುಭ ಹಾರೈಸಿದರು. ಜನರಲ್ ಮ್ಯಾನೇಜರ್(ಸೇಲ್ಸ್) ಎಸ್.ಬಾಲಕೃಷ್ಣನ್ ಸ್ವಾಗತಿಸಿದರು. ದಿಶಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.

‘ಟೊಯೊಟಾ ಯಾರಿಸ್’ ಸುರಕ್ಷತೆಯ ದೃಷ್ಟಿಯಿಂದ ಏಳು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್(ವಿಎಸ್‌ಸಿ), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಲ್ಲಾ ಟಯರ್‌ಗಳಿಗೂ ಡಿಸ್ಕ್‌ಬ್ರೇಕ್ ವ್ಯವಸ್ಥೆಯನ್ನು ಹೊಂದಿದೆ.

ರಿಯರ್ ಫಾಗ್ ಲ್ಯಾಂಪ್ಸ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸರ್ಸ್‌, ಪವರ್ ಡ್ರೈವರ್ ಸೀಟ್, 7 ಸ್ಪೀಡ್ ಸಿವಿಟಿ ಸೌಲಭ್ಯಗಳ ಸಹಿತ ಹಲವು ವೈಶಿಷ್ಟಗಳನ್ನು ಹೊಂದಿದೆ ಎಂದು ಸೇಲ್ಸ್ ಟ್ರೈನರ್ ಭಾಗ್ಯರಾಜ್ ಕಾರಿನ ವಿಶೇಷತೆಗಳ ಬಗ್ಗೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News