ಕಂಕನಾಡಿ: ಝೀಬ್ರಾ ಕ್ರಾಸ್‌ಗೆ ಮಂಗಳೂರು ಸಿಟಿ ಟ್ರಾಫಿಕ್ ಪೊಲೀಸ್ 'ಬೇಲಿ'!
ಮಂಗಳೂರು, ಎ.25: ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಝೀಬ್ರಾ ಕ್ರಾಸ್‌ಗೆ ಅಡ್ಡವಾಗಿ 'ಬೇಲಿ' ಹಾಕಲಾಗಿದ್ದು, ಸಾರ್ವಜನಿಕರು ರಸ್ತೆ ವಿಭಜಕ ಹಾರಿ ರಸ್ತೆ ದಾಟುವಂತಾಗಿದೆ.
ಫಾದರ್ ಮುಲ್ಲರ್ ಆಸ್ಪತ್ರೆ ಸಮೀಪದ ಕಂಕನಾಡಿ ವೃತ್ತದಿಂದ ವೆಲೆನ್ಸಿಯಾ ರಸ್ತೆಯ ಆರಂಭದಲ್ಲಿ ಇರುವ ಝೀಬ್ರಾ ಕ್ರಾಸ್‌ಗೆ ಅಡ್ಡವಾಗಿ ಬೇಲಿ ಹಾಕಲಾಗಿದೆ. ‘ಮಂಗಳೂರು ಸಿಟಿ ಟ್ರಾಫಿಕ್ ಪೊಲೀಸ್’ ಹೆಸರಿರುವ ಎರಡು ಬ್ಯಾರಿಕೇಡ್‌ಗಳನ್ನು ಇಟ್ಟು ಅದರ ಸಹಾಯದಿಂದ ಅಡ್ಡವಾಗಿ 'ಪೊಲೀಸ್ ಲೈನ್' ಎಳೆಯಲಾಗಿದೆ. ಈ ಭಾಗದಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟಲು ಇರುವ ಒಂದು ಝೀಬ್ರಾ ಕ್ರಾಸ್ ಅನ್ನೂ ಇದೀಗ ಬಂದ್ ಮಾಡಿರುವುದರಿಂದ ಜನರು ರಸ್ತೆವಿಭಜಕವನ್ನು ಹಾರಿ ರಸ್ತೆ ದಾಟಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಯುವ ಜನರು ರಸ್ತೆ ವಿಭಜಕವನ್ನು ಹಾರಿ ರಸ್ತೆ ದಾಟುತ್ತಾರೆ. ಆದರೆ ಹಿರಿಯ ನಾಗರಿಕರು ರಸ್ತೆ ದಾಟಲು ಸಂಕಷ್ಟ ಅನುಭವಿಸುತ್ತಿದ್ದಾರೆ.
'ಪೊಲೀಸ್ ಲೈನ್' ಹಾಕಿರುವ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಆದರೂ ಝೀಬ್ರಾ ಕ್ರಾಸ್‌ಗೆ ಯಾವ ಉದ್ದೇಶಕ್ಕಾಗಿ ಈ ಬೇಲಿ ಹಾಕಲಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.