×
Ad

ಒಂದೂ ಪೈಸೆ ಪಡೆಯದೇ ಡೆಲ್ಲಿ ಪರ ಐಪಿಎಲ್‌ನಲ್ಲಿ ಆಡಲಿದ್ದಾರೆ ಗಂಭೀರ್!

Update: 2018-04-25 20:02 IST

ಕೋಲ್ಕತಾ, ಎ.25: ಐಪಿಎಲ್‌ನಲ್ಲಿ ಡೆಲ್ಲಿ ತಂಡದ ಕಳಪೆ ಪ್ರದರ್ಶನದ ನೈತಿಕ ಹೊಣೆಹೊತ್ತು ನಾಯಕತ್ವವನ್ನು ತ್ಯಜಿಸಿರುವ ಗೌತಮ್ ಗಂಭೀರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಒಂದೂ ಪೈಸೆ ಪಡೆಯದೇ ಉಚಿತವಾಗಿ ಈ ವರ್ಷದ ಐಪಿಎಲ್‌ನಲ್ಲಿ ಡೆಲ್ಲಿ ಪರ ಆಡಲು ನಿರ್ಧರಿಸಿದ್ದಾರೆ.

ಗಂಭೀರ್ ತನಗೆ ಲಭಿಸಲಿರುವ 2.8 ಕೋ.ರೂ. ಸಂಭಾವನೆ ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಐಪಿಎಲ್ ನಾಯಕನೊಬ್ಬ ಕಳಪೆ ಪ್ರದರ್ಶನಕ್ಕೆ ಇಂತಹ ನಿರ್ಧಾರ ಕೈಗೊಂಡಿದ್ದು ಇದೇ ಮೊದಲು.

ಡೆಲ್ಲಿ ತಂಡ ತನ್ನ ನಾಯಕತ್ವದಲ್ಲಿ 6ರಲ್ಲಿ 5 ಐಪಿಎಲ್ ಪಂದ್ಯಗಳನ್ನು ಸೋತಿದ್ದಕ್ಕೆ ಬೇಸತ್ತ ಗಂಭೀರ್ ನಾಯಕತ್ವವನ್ನು ತ್ಯಜಿಸಿದರು. ಬ್ಯಾಟಿಂಗ್‌ನಲ್ಲಿ ಕೇವಲ 85 ರನ್ ಗಳಿಸಿದ್ದರು.

‘‘ಈ ಋತುವಿನಲ್ಲಿ ಗಂಭೀರ್ ಡೆಲ್ಲಿ ಫ್ರಾಂಚೈಸಿಯಿಂದ ಸಂಬಳ ಪಡೆಯದೇ ಇರಲು ನಿರ್ಧರಿಸಿದ್ದಾರೆ. ಅವರು ಐಪಿಎಲ್‌ನ ಉಳಿದ ಪಂದ್ಯಗಳನ್ನು ಉಚಿತವಾಗಿ ಆಡಲಿದ್ದಾರೆ. ಇದು ಅವರ ವೈಯಕ್ತಿಕ ನಿರ್ಧಾರ’’ ಎಂದು ಮೂಲಗಳು ತಿಳಿಸಿವೆ.

ಆಟಗಾರನಾಗಿ ಡೆಲ್ಲಿ ತಂಡದಲ್ಲಿ ಮುಂದುವರಿಲಿರುವ ಗಂಭೀರ್ ಟೂರ್ನಿ ಮುಗಿದ ಬಳಿಕ ವೃತ್ತಿ ಭವಿಷ್ಯದ ನಿರ್ಧಾರ ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News