ಆ್ಯಂಟನಿ, ಎಪಿಡಿ ಫೌಂಡೇಶನ್‌ನಿಂದ ಭೂದಿನ ಆಚರಣೆ
Update: 2018-04-25 20:11 IST
ಮಂಗಳೂರು, ಎ. 25: ಎಪಿಡಿ ಫೌಂಡೇಶನ್ ಮತ್ತು ಆ್ಯಂಟನಿ ತ್ಯಾಜ್ಯ ಹ್ಯಾಂಡ್ಲಿಂಗ್ ಸೆಲ್ ಪ್ರೈ. ಲಿ. ಜೊತೆಗೂಡಿ 48ನೆ ವಿಶ್ವ ಭೂದಿನವನ್ನು ಎ.21ರಂದು ಪಣಂಬೂರು ಕಡಲತೀರ ಮತ್ತು ಎ.23ರಂದು ಕಸಬಾ ಬೆಂಗ್ರೆಯಲ್ಲಿ ಶುಚಿಗೊಳಿಸುವ ಮೂಲಕ ಆಚರಿಸಿದೆ.
ಪ್ಲಾಸ್ಟಿಕ್ ಮಾಲಿನ್ಯವನ್ನು ಅಂತ್ಯಗೊಳಿಸಲು ಜಾಗತಿಕ ಕಾಳಜಿಯನ್ನು ಹೆಚ್ಚಿಸಲು ಪೌರ ಕಾರ್ಮಿಕರು ಮತ್ತು ಆ್ಯಂಟನಿ ತ್ಯಾಜ್ಯ ಹ್ಯಾಂಡ್ಲಿಂಗ್ ಸೆಲ್ ಅಧಿಕಾರಿಗಳೊಂದಿಗೆ ಎಪಿಡಿ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಭವಿಷ್ಯದ ಪೀಳಿಗೆಗೆ ನಮ್ಮ ಕರಾವಳಿ ನಗರವನ್ನು ಮತ್ತು ಭೂಮಿಯನ್ನು ಸುಂದರವಾಗಿ ಹಾಗೂ ಸುರಕ್ಷಿತವಾಗಿರಿಸಿಕೊಳ್ಳಲು ಹೆಚ್ಚಿನ ಕ್ರಮವು ಅಗತ್ಯ ಎಂದು ಆ್ಯಂಟನಿ ತ್ಯಾಜ್ಯ ಹ್ಯಾಂಡ್ಲಿಂಗ್ ಸೆಲ್ ಪ್ರೈವೇಟ್ ಲಿಮಿಟೆಡ್ ಕಾರ್ಯಾಚರಣೆಯ ಮುಖ್ಯಸ್ಥ ಸಂತೋಷ್ ನಾಯರ್ ಹೇಳಿದರು.