×
Ad

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಬೇಸಿಗೆ ಶಿಬಿರ

Update: 2018-04-25 21:44 IST

ಬಂಟ್ವಾಳ, ಎ.25: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ಮತ್ತು ಆಕ್ಸೆಸ್ ಇಂಡಿಯಾ ಕರ್ನಾಟಕ ಇದರ ಸಹಯೋಗದಲ್ಲಿ 6 ದಿನಗಳ ಬೇಸಿಗೆ ಶಿಬಿರವು ಇತ್ತೀಚೆಗೆ ಮಿತ್ತೂರಿನ ಫ್ರೀಡಂ ಸಭಾಂಗಣದಲ್ಲಿ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ಶಿಬಿರದ ಅಗ್ಯತ್ಯತೆ ಹಾಗೂ ಮಹತ್ವದ ಕುರಿತು ವಿವರಿಸಿದರು.

ಶಿಬಿರದ ನಿರ್ದೇಶಕರಾಗಿ ವಝೀರ್ ಬೆಳ್ತಂಗಡಿ ಹಾಗೂ ಸಂಚಾಲಕರಾಗಿ ರಿಯಾಝ್ ಕಾರ್ಯನಿರ್ವಹಿಸಿದರು.

ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ದೈಹಿಕ ತರಬೇತಿ, ವೃತ್ತಿ ಮಾರ್ಗದರ್ಶನ, ಗುಂಪು ಚಟುವಟಿಕೆ ಮತ್ತು ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಷಯಗಳ ಬಗ್ಗೆ ತರಬೇತಿಗಳನ್ನು ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನಿಂದ ಸುಮಾರು 60ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ತಫ್ಸೀರ್ ಭಾಗವಹಿಸಿ ಶಿಬಿರದ ಸದುಪಯೋಗದ ಕುರಿತು ಮಾರ್ಗದರ್ಶನ ನೀಡಿದರು

ಆಕ್ಸೆಸ್ ಇಂಡಿಯಾ ಕರ್ನಾಟಕ ಮುಖ್ಯಸ್ಥ ಅಶ್ರಫ್ ಮಾಚಾರ್, ದ.ಕ ಜಿಲ್ಲಾ ಕಾರ್ಯದರ್ಶಿ ಸಾದಿಕ್ ಪುತ್ತೂರು, ತಾಲೂಕು ಪದಾಧಿಕಾರಿಗಳಾದ ಸಲ್ಮಾನ್, ಸವಾದ್, ಶಾಹುಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News