ಚುನಾವಣಾ ಪ್ರಚಾರಕ್ಕೆ ವಿಷಯವೇ ಇಲ್ಲದ ಬಿಜೆಪಿಯಿಂದ ಅಪಪ್ರಚಾರ: ರೈ
ಬಂಟಾಳ, ಎ.25: ಬಿಜೆಪಿಯವರಿಗೆ ಪ್ರಚಾರ ಮಾಡಲು ವಿಷಯವೇ ಇಲ್ಲ. ಅದಕ್ಕಾಗಿ ತನ್ನ ಮೇಲೆ ಸುಳ್ಳು ಆರೋಪವನ್ನು ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅ್ಯರ್ಥಿ ಬಿ.ರಮಾನಾಥ ರೈ ಹೇಳಿದ್ದಾರೆ.
ಮಂಗಳವಾರ ಕೊಳ್ನಾಡ್ ಗ್ರಾಮದ ಬೂತ್ ಮಟ್ಟದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯು ತನ್ನ ಮೇಲೆ ಧರ್ಮ ವಿರೋಧಿ ಹಣೆಪಟ್ಟಿ ಕಟ್ಟಿ, ಅಪಪ್ರಚಾರದ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿರುವುದು ರಾಜಧರ್ಮವಲ್ಲ ಎಂದರು.
ಬಂಟ್ವಾಳ ಕ್ಷೇತ್ರಕ್ಕೆ ಸುಮಾರು ಸಾವಿರದ ಇನ್ನೂರು ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿಸಿ ಇಷ್ಟೆಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಯಾವುದಾದರೂ ಕೆಲಸವೊಂದು ಮಾಡದೆ ಉಳಿದಿದ್ದರೆ, ಅಥವಾ ನಿರ್ಕ್ಷಿಸಿದ್ದರೆ ಅದನ್ನು ರಾಜಾರೋಷವಾಗಿ ಹೇಳಲಿ. ಅದಕ್ಕೆ ತಾನು ತಲೆಬಾಗುತ್ತೇನೆ ಎಂದು ರೈ ಹೇಳಿದರು.
ಈ ಸಂದರ್ಭ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಎಂ.ಎಸ್. ಮುಹಮ್ಮದ್, ಸುಭಾಶ್, ಇಬ್ರಾಹೀಂ, ಅಬ್ದುಲ್ಲಾ ಮುಂತಾದವರು ಉಪಸ್ಥಿತರಿದ್ದರು.