ನಾರ್ಲಪದವು: ದಾರುಲ್ ಕುರ್‌ಆನ್ ಮಹಿಳಾ ಶರೀಅತ್ ಕಾಲೇಜು ಉದ್ಘಾಟನೆ

Update: 2018-04-25 17:06 GMT

ಮಂಗಳೂರು, ಎ.25: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಕಿಸಾ ಇದರ ಅಧೀನದಲ್ಲಿ ನಾರ್ಲಪದವು ವಾದಿಸ್ಸಲಾಮದಲ್ಲಿ ದಾರುಲ್ ಕುರ್‌ಆನ್ ಮಹಿಳಾ ಶರೀಅತ್ ಕಾಲೇಜು ಕಟ್ಟಡ ಬುಧವಾರ ಉದ್ಘಾಟನೆಗೊಂಡಿತು.

ಪಾಣಕ್ಕಾಡ್ ಅಬ್ಬಾಸ್‌ಅಲಿ ಶಿಹಾಬ್ ತಂಙಳ್, ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್, ಪಾಣಕ್ಕಾಡ್ ಹಮೀದಲಿ ಶಿಹಾಬ್ ತಂಙಳ್ ಹಾಗೂ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಂಯುಕ್ತವಾಗಿ ಉದ್ಘಾಟಿಸಿದರು.

ಬಳಿಕ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಖಾಝಿ ವಹಿಸಿದ್ದರು.

ಸಮಾರಂಭದಲ್ಲಿ ಅಸ್ಗರಲಿ ತಂಙಳ್, ಝೈನುಲ್ ಆಬಿದೀನ್ ತಂಙಳ್, ಸಮಸ್ತ ಶಿಕ್ಷಣ ಮಂಡಳಿ ಕಾರ್ಯದರ್ಶಿ ಖಾಸಿಂ ಉಸ್ತಾದ್, ಬೊಳ್ಳೂರು ಉಸ್ತಾದ್, ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಭಾರತ್ ಮುಸ್ತಫ ಮಂಗಳೂರು, ಶರೀಫ್ ದಾರಿಮಿ ಸೂರಲ್ಪಾಡಿ, ಮಾಹಿನ್ ದಾರಿಮಿ ಪಾತೂರು, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಉಸ್ಮಾನ್ ಫೈಝಿ ತೋಡಾರ್, ಅಬ್ದುರ್ರಹ್ಮಾನ್ ಅಡ್ಡೂರು, ವಿಶ್ವಾಸ್ ಅಬ್ದುರ್ರವೂಫ್ ಪುತ್ತಿಗೆ, ಅಲ್ತಾಫ್ ಫರಂಗಿಪೇಟೆ, ಮುಸ್ತಫ ಫರಂಗಿಪೇಟೆ, ಇಸ್ಮಾಯೀಲ್ ಉರುಮಣೆ, ಅಶ್ರಫ್ ಮರಾಠಿಮೊಲೆ, ಮುಹಮ್ಮದ್ ಬ್ಯಾರಿ, ಅಬ್ದುಲ್ ಮಜೀದ್ ಸೂರಲ್ಪಾಡಿ, ಉಸ್ಮಾನ್ ಹಾಜಿ ಸೂರಲ್ಪಾಡಿ, ಅಬ್ದುಲ್ಲತೀಫ್ ಮದರ್ ಇಂಡಿಯಾ, ಎಂ.ಎಚ್. ಹಾಜಿ ಅಡ್ಡೂರು, ಅಬ್ದುಲ್ ಖಾದರ್ ಮದರ್ ಇಂಡಿಯಾ, ಮಾಸ್ಟರ್ ಫಕೀರಬ್ಬ, ಇಬ್ರಾಹೀಂ ಕೊಣಾಜೆ, ರಿಯಾಝ್ ಕಣ್ಣೂರು, ಜಮಾಲುದ್ದೀನ್ ಫೈಝಿ, ಅಯ್ಯೂಬ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ಮಜೀದ್ ಸಿತಾರ್ ಸ್ವಾಗತಿಸಿದರು. ಎ.ಎಚ್.ನೌಷಾದ್ ಹಾಜಿ ವಂದಿಸಿದರು. ಮುಸ್ತಫ ಫೈಝಿ ಕಿನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ತಂಙಳ್ ಸಹಿತ ಇತರ ಗಣ್ಯರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News