ಸಿಖ್ ರಾಣಿಯ ಕಿವಿಯೋಲೆಗಳು ದಾಖಲೆ ಬೆಲೆಗೆ ಮಾರಾಟ
Update: 2018-04-25 23:18 IST
ಲಂಡನ್, ಎ. 25: ಪಂಜಾಬ್‌ನ ಕೊನೆಯ ಸಿಖ್ ರಾಜನ ತಾಯಿ ಮಹಾರಾಣಿ ಜಿಂದ್ ಕೌರ್ ಅವರ ಚಿನ್ನದ ಕಿವಿಯೋಲೆಗಳು ಇಲ್ಲಿ ಮಂಗಳವಾರ ನಡೆದ ಬೋನ್‌ಹ್ಯಾಮ್ಸ್ ಇಸ್ಲಾಮಿಕ್ ಮತ್ತು ಭಾರತೀಯ ಮಾರಾಟದಲ್ಲಿ ದಾಖಲೆಯ 1.75 ಲಕ್ಷ ಪೌಂಡ್ (ಸುಮಾರು 1.6 ಕೋಟಿ ರೂಪಾಯಿ)ಗೆ ಮಾರಾಟವಾಗಿದೆ.
ಈ ಕಿವಿಯೋಲೆಗಳು 20,000 (ಸುಮಾರು 18.66 ಲಕ್ಷ ರೂಪಾಯಿ) ದಿಂದ 30,000 ಪೌಂಡ್ (ಸುಮಾರು 28 ಲಕ್ಷ ರೂಪಾಯಿ)ಗೆ ಮಾರಾಟವಾಗಬಹುದೆಂದು ನಿರೀಕ್ಷಿಸಲಾಗಿತ್ತು.
ಬ್ರಿಟಿಶ್ ಸೈನಿಕರು ಸಿಖ್ ಮಹಾರಾಣಿಯನ್ನು 1846ರಲ್ಲಿ ಪದಚ್ಯುತಗೊಳಿಸಿದ ಬಳಿಕ, ಅವರ ಚಿನ್ನಾಭರಣಗಳನ್ನು ದೋಚಿದ್ದರು. ಮಂಗಳವಾರ ದಾಖಲೆ ಬೆಲೆಗೆ ಮಾರಾಟಗೊಂಡ ಕಿವಿಯೋಲೆಗಳು ಈ ಚಿನ್ನಾಭರಣಗಳ ಭಂಡಾರದ ಭಾಗವಾಗಿತ್ತು.