×
Ad

​ಬಿಜೆಪಿಯೊಳಗಿನ ಗೊಂದಲ ತನ್ನ ಗೆಲುವಿಗೆ ಪೂರಕ: ಶ್ರೀಕರ ಪ್ರಭು

Update: 2018-04-26 14:28 IST

ಮಂಗಳೂರು, ಎ.26: ಬಿಜೆಪಿಯೊಳಗಿನ ಗೊಂದಲ ತನ್ನ ಗೆಲುವಿಗೆ ಪೂರಕವಾಗಲಿದೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀಕರ ಪ್ರಭು ಹೇಳಿದ್ದಾರೆ.

ನಗರದಲ್ಲಿರುವ ತನ್ನ ಚುನಾವಣಾ ಪ್ರಚಾರ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಇಲ್ಲಿನ ಅಭ್ಯರ್ಥಿಗಳಿಬ್ಬರೂ ಸರಿ ಇಲ್ಲ. ಹಾಲಿ ಶಾಸಕ ಜೆ.ಆರ್.ಲೋಬೊ ಅವರ ಮೇಲೆ ಕುಡ್ಸೆಂಪ್ ಹಗರಣದ ಆರೋಪ ಇದೆ. ಮೊದಲ ಶಾಸಕತ್ವದ ಅವಧಿಯಲ್ಲಿ ಅವರೊಬ್ಬ ಭ್ರಷ್ಟಾಚಾರಿ ಎಂಬುದು ಸಾಬೀತಾಗಿದೆ. ಇದೇವೇಳೆ ಇಲ್ಲಿನ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಕೊಲೆ ಆರೋಪಿಯೊಂದಿಗೆ ಗುರುತಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ ಎಂದರು.
ಐದು ವರ್ಷಗಳ ಹಿಂದೆ ನನ್ನನ್ನು ಪಕ್ಷದಿಂದ ಹೊರದಬ್ಬಿರುವುದು ನೋವುಂಟು ಮಾಡಿದೆ. ಈ ಹಿಂದೆ ನಾನು ಜನಸೇವೆ ಮಾಡಿದವನು. ಇದೀಗ ಮತ್ತೆ ಜನಸೇವೆಯ ಅವಕಾಶ ಪಡೆಯಲು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಗೆಲುವು ತನ್ನದೇ ಎಂದು ಶ್ರೀಕರ ಪ್ರಭು ವಿಶ್ವಾಸ ವ್ಯಕ್ತಪಡಿಸಿದರು 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News