ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಲಂಡನ್ ನಲ್ಲಿ ವಿಜಯ್ ಮಲ್ಯ ಹೇಳಿದ್ದೇನು?
Update: 2018-04-27 19:17 IST
ಹೊಸದಿಲ್ಲಿ, ಎ.27: ಭಾರತದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿದ ಆರೋಪ ಎದುರಿಸುತ್ತಿರುವ, ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಇಂದು ಭಾರತದ ಹಸ್ತಾಂತರ ಮನವಿಯ ಹಿನ್ನೆಲೆಯಲ್ಲಿ ಇಂದು ಬ್ರಿಟನ್ ಕೋರ್ಟ್ ಗೆ ಆಗಮಿಸಿದ್ದರು.
ಭಾರತದ ಜೈಲುಗಳು ಅತ್ಯಂತ ಕಳಪೆ ಗುಣಮಟ್ಟದಲ್ಲಿರುವುದರಿಂದ ತನ್ನನ್ನು ಭಾರತಕ್ಕೆ ಹಸ್ತಾಂತರಿಸಬಾರದು ಎಂದವರು ಕೋರ್ಟ್ ಗೆ ತಿಳಿಸಿದರು.
ನಂತರ ಭಾರತದ ಮಾಧ್ಯಮದವರೊಂದಿಗೆ ಕರ್ನಾಟಕದ ಚುನಾವಣೆಯ ಬಗ್ಗೆ ಮಾತನಾಡಿದ ಮಲ್ಯ, ಕರ್ನಾಟಕದಲ್ಲಿ ಮತ ಚಲಾಯಿಸುವುದು ನನ್ನ ಪ್ರಜಾಪ್ರಭುತ್ವ ಹಕ್ಕಾಗಿದೆ. ನಾನು ಇಲ್ಲಿ ಇರುವುದರಿಂದ ನನಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಮತದಾನ ನನಗೆ ಸಾಧ್ಯವಿಲ್ಲ…” ಎಂದು ಹೇಳಿದರು ಎನ್ನಲಾಗಿದೆ.