ದ.ಕ.ದಲ್ಲಿ 58 ಅಭ್ಯರ್ಥಿಗಳು ಅಂತಿಮ ಕಣದಲ್ಲಿ: ಜಿಲ್ಲಾಧಿಕಾರಿ ಸಸಿಕಾಂತ್
ಮಂಗಳೂರು, ಎ.27: ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಶುಕ್ರವಾರ ದ.ಕ. ಜಿಲ್ಲೆಯಲ್ಲಿ 8 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಅಂತಿಮ ಸ್ಪರ್ಧಾ ಕಣದಲ್ಲಿ 58 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಚುನಾವಣೆಗೆ 66 ಅಭ್ಯರ್ಥಿಗಳಿಂದ ಒಟ್ಟು 102 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶುಕ್ರವಾರ 8 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಮುಹಮ್ಮದ್ ರಿಯಾಝ್ (ಎಸ್‌ಡಿಪಿಐ), ಅಬ್ದುಲ್ ಮಜೀದ್ ಖಾನ್ (ಎಸ್‌ಡಿಪಿಐ), ಬೆಳ್ತಂಗಡಿ ಕ್ಷೇತ್ರದಿಂದ ಪ್ರಸಾದ್ ಕುಮಾರ್ (ಶಿವಸೇನೆ), ಮಂಗಳೂರು ನಗರ ಉತ್ತರದಿಂದ ಡಿ.ಪಿ.ಹಮ್ಮಬ್ಬ (ಜೆಡಿಎಸ್), ಮಂಗಳೂರು ನಗರ ದಕ್ಷಿಣದಿಂದ ಮ್ಯಾಕ್ಸಿಮ್ ಪಿಂಟೋ (ಪಕ್ಷೇತರ), ಪ್ಯಾಟ್ರಿಕ್ ಲೋಬೊ (ಪಕ್ಷೇತರ), ಪುತ್ತೂರಿನಿಂದ ಮುಹಮ್ಮದ್ ಅಶ್ರಫ್ ಕಲ್ಲೇಗ (ಜೆ.ಡಿ.ಎಸ್.)ಸುಳ್ಯದಿಂದ ರಮೇಶ ಕೆ. (ಪಕ್ಷೇತರ) ಅಭ್ಯರ್ಥಿಗಳು ನಾಮಪತ್ರ ಹಿಂಪಡೆದವರು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಅಂತಿಮ ಕಣದಲ್ಲಿರುವ 58 ಅಭ್ಯರ್ಥಿಗಳ ವಿವರ ಇಂತಿವೆ
ಬೆಳ್ತಂಗಡಿ ಕ್ಷೇತ್ರ: ಕೆ. ವಸಂತ ಬಂಗೇರ(ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್),
ಹರೀಶ್ ಪೂಂಜಾ (ಬಿ.ಜೆ.ಪಿ), ವೆಂಕಟೇಶ್ ಬೆಂಡೆ (ಪಕ್ಷೇತರ), ಜಗನ್ನಾಥ(ಎಂಇಪಿ), ಸೈಯದ್ ಹಸನ್(ಪಕ್ಷೇತರ).
ಮೂಡುಬಿದಿರೆ ಕ್ಷೇತ್ರ: ಕೆ.ಅಭಯಚಂದ್ರ(ಕಾಂಗ್ರೆಸ್), ಉಮಾನಾಥ ಎ. ಕೋಟ್ಯಾನ್ (ಬಿ.ಜೆ.ಪಿ), ಜೀವನ್ ಕೃಷ್ಣ ಶೆಟ್ಟಿ (ಜೆ.ಡಿ.ಎಸ್), ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ), ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಅಬ್ದುಲ್ ರಹ್ಮಾನ್ (ಎಂ.ಇ.ಪಿ.).
ಮಂಗಳೂರು ಉತ್ತರ ಕ್ಷೇತ್ರ: ಸುರೇಶ್ ಬಿ. ಸಾಲ್ಯಾನ್ (ಅಖಿಲ ಭಾರತ ಹಿಂದೂ ಮಹಾಸಭಾ), ಮೊಯ್ದಿನ್ ಬಾವಾ (ಕಾಂಗ್ರೆಸ್), ಡಾ.ವೈ.ಭರತ್ ಶೆಟ್ಟಿ (ಬಿ.ಜೆ.ಪಿ), ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ), ಪಿ.ಎಂ. ಅಹ್ಮದ್ (ಎಂ.ಇ.ಪಿ), ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ), ಮ್ಯಾಕ್ಸಿಂ ಪಿಂಟೋ (ಪಕ್ಷೇತರ).
ಮಂಗಳೂರು ದಕ್ಷಿಣ ಕ್ಷೇತ್ರ: ಜೆ.ಆರ್.ಲೋಬೊ (ಕಾಂಗ್ರೆಸ್), ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ), ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ), ರೀನಾ ಪಿಂಟೋ (ಪಕ್ಷೇತರ), ಮದನ್ ಎಂ.ಸಿ. (ಪಕ್ಷೇತರ), ಆರ್.ಶ್ರೀಕರ ಪ್ರಭು (ಪಕ್ಷೇತರ), ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ), ರತ್ನಾಕರ ಸುವರ್ಣ (ಜೆ.ಡಿ.ಎಸ್), ಮುಹಮ್ಮದ್ ಖಾಲಿದ್ (ಪಕ್ಷೇತರ), ಮುಹಮ್ಮದ್ ಇಕ್ಬಾಲ್ (ಎಂಇಪಿ) ಧರ್ಮೇಂದ್ರ (ಅಖಿಲ ಭಾರತ್ ಹಿಂದೂ ಮಹಾಸಭಾ).
ಮಂಗಳೂರು ಕ್ಷೇತ್ರ: ನಿತಿನ್ ಕುತ್ತಾರ್(ಸಿ.ಪಿ.ಐ.ಎಂ.), ಸಂತೋಷ್ ಕುಮಾರ್ ರೈ (ಬಿ.ಜೆ.ಪಿ), ಯು.ಟಿ.ಖಾದರ್ (ಕಾಂಗ್ರೆಸ್), ಕೆ.ಅಶ್ರಫ್ (ಜೆ.ಡಿ.ಎಸ್), ಉಸ್ಮಾನ್ (ಎಂ.ಇ.ಪಿ).
ಬಂಟ್ವಾಳ ಕ್ಷೇತ್ರ: ಬಿ.ರಮಾನಾಥ ರೈ (ಕಾಂಗ್ರೆಸ್), ರಾಜೇಶ್ ನಾಕ್(ಬಿ.ಜೆ.ಪಿ), ಇಬ್ರಾಹೀಂ ಕೈಲಾರ್ (ಪಕ್ಷೇತರ), ಬಾಲಕೃಷ್ಣ ಪೂಜಾರಿ(ಲೋಕ್ ಆವಾಜ್ ದಳ), ಶಮೀರ್ (ಎಂ.ಇ.ಪಿ.).
ಪುತ್ತೂರು ಕ್ಷೇತ್ರ: ಶಕುಂತಳಾ ಟಿ. ಶೆಟ್ಟಿ (ಕಾಂಗ್ರೆಸ್), ಸಂಜೀವ ಮಠಂದೂರು (ಬಿ.ಜೆ.ಪಿ), ಶೇಖರ ಬಿ. (ಪ್ರಜಾ ಪರಿವರ್ತನ ಪಾರ್ಟಿ), ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ), ಐ.ಸಿ.ಕೈಲಾಸ್ (ಜೆ.ಡಿ.ಎಸ್), ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ), ಶಬಾನ ಎಸ್. ಶೇಖ್ (ಎಂ.ಇ.ಪಿ), ಮಜೀದ್ (ಸಂಯುಕ್ತ ಜನತಾ ದಳ), ವಿದ್ಯಾಶ್ರೀ (ಪಕ್ಷೇತರ), ಬಿ.ಎಸ್. ಚೇತನ ಕುಮಾರ್ (ಪಕ್ಷೇತರ), ಅಮರನಾಥ ಬಿ.ಕೆ(ಪಕ್ಷೇತರ).
ಸುಳ್ಯ ಕ್ಷೇತ್ರ: ಅಂಗಾರ ಎಸ್.(ಬಿ.ಜೆ.ಪಿ), ಡಾ.ಬಿ.ರಘು (ಕಾಂಗ್ರೆಸ್), ಸಂಜೀವ ಬಾಬು ರಾವ್ ಕುರಾನ್ಡ್‌ವಾಡ್(ಪಕ್ಷೇತರ), ಸುಂದರ ಕೆ. (ಪಕ್ಷೇತರ), ರಘು (ಬಹುಜನ ಸಮಾಜ ಪಾರ್ಟಿ), ಚಂದ್ರಶೇಖರ ಕೆ (ಪಕ್ಷೇತರ).
17.11 ಲಕ್ಷ ಮತದಾರರು
ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 17,11,848 ಮತದಾರರಿದ್ದಾರೆ. ಇದರಲ್ಲಿ 8,41,073 ಪುರುಷ ಹಾಗೂ 8,70,675 ಮಹಿಳಾ ಮತದಾರರ ಸಹಿತ ಇತರ 100 ಮಂದಿ ಸೇರಿದ್ದಾರೆ. ಬೆಳ್ತಂಗಡಿ ಕ್ಷೇತ್ರದಿಂದ 2,18,880, ಮೂಡುಬಿದಿರೆ 2,00,045, ಮಂಗಳೂರು ನಗರ ಉತ್ತರ 2,34,826, ಮಂಗಳೂರು ನಗರ ದಕ್ಷಿಣ 2,40,057, ಮಂಗಳೂರು 1,95,735, ಬಂಟ್ವಾಳ 2,21,735, ಪುತ್ತೂರು 2,01,884 ಹಾಗೂ ಸುಳ್ಯ ಕ್ಷೇತ್ರದಲ್ಲಿ 1,98,686 ಮತದಾರರು ಇದ್ದಾರೆ ಎಂದು ಅವರು ತಿಳಿಸಿದರು.
1,858 ಮತಗಟ್ಟೆಗಳು
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,858 ಮತಗಟ್ಟೆಗಳಿವೆ. ಬೆಳ್ತಗಂಡಿ 243, ಮೂಡುಬಿದಿರೆ 221, ಮಂಗಳೂರು ಉತ್ತರ 245, ಮಂಗಳೂರು ದಕ್ಷಿಣ 238, ಮಂಗಳೂರು 210, ಬಂಟ್ವಾಳ 249, ಪುತ್ತೂರು 223 ಮತ್ತು ಸುಳ್ಯದಲ್ಲಿ 229 ಮತದಾನ ಕೇಂದ್ರಗಳಿವೆ ಎಂದರು.