×
Ad

ಚುನಾವಣಾ ಕರ್ತವ್ಯ ಲೋಪ: ಮುಖ್ಯಶಿಕ್ಷಕಿ ವಿರುದ್ಧ ಪ್ರಕರಣ

Update: 2018-04-27 20:59 IST

ಕಾರ್ಕಳ, ಎ.27: ಚುನಾವಣಾ ಕರ್ತವ್ಯಕ್ಕೆ ಹಾಜರಾಗದೆ ಗಂಭೀರ ಕರ್ತವ್ಯ ಲೋಪ ಎಸಗಿರುವ ಕುಕ್ಕುಂದೂರು ಶಾಲಾ ಮುಖ್ಯ ಶಿಕ್ಷಕಿಯೊಬ್ಬರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಕ್ಕುಂದೂರು ಶ್ರೀದುರ್ಗಾ ಅನುದಾನಿತ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಹೇಮಲತಾ ಬಿ. ಶೆಟ್ಟಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಪಿಆರ್‌ಓ ಆಗಿ ಕಾರ್ಯ ನಿರ್ವಹಿಸಲು ಚುನಾವಣಾ ಅಧಿಕಾರಿಯಿಂದ ನೇಮಕಾತಿ ಆದೇಶ ಪಡೆದಿದ್ದರು. ಆದರೆ ಅವರು ಚುನಾವಣಾ ಕರ್ತವ್ಯಕ್ಕೆ ಹಾಜರಾಗದೆ, ಚುನಾವಣಾ ಅಧಿಕಾರಿಯವರ ಪೂರ್ವಾನುಮತಿ ಪಡೆಯದೇ ಎ.12ರಂದು ವಿದೇಶಕ್ಕೆ ಪ್ರಯಾಣ ಮಾಡಿದ್ದರು. ಈ ಮೂಲಕ ಅವರು ಚುನಾವಣಾ ಕೆಲಸದಲ್ಲಿ ನಿರ್ಲಕ್ಷತೆ ತೋರಿ ಗಂಭೀರ ಕರ್ತವ್ಯ ಲೋಪ ಎಸಗಿರುವುದಾಗಿ ಕಾರ್ಕಳ ವಿಧಾನ ಸಭಾ ಚುನಾವಣಾಧಿಕಾರಿ ಕುಸುಮಾ ಕುಮಾರಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News