ಕೃಷ್ಣಾಪುರ: ಎ.29ರಂದು ಸರಳ ವಿವಾಹ ಸಮಾರಂಭ
ಸುರತ್ಕಲ್, ಎ.27: 7ನೇ ಬ್ಲಾಕ್ ಕೃಷ್ಣಾಪುರದ ಸಿರಾಜುಲ್ ಹುದಾ ಅಸೋಸಿಯೇಶನ್‌ನ 18ನೇ ವಾರ್ಷಿಕೋತ್ಸವದ ಅಂಗವಾಗಿ ಎ.29ರಂದು ಸರಳ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಪೂರ್ವಾಹ್ನ 11ಕ್ಕೆ ಕೃಷ್ಣಾಪುರ ಈದ್ಗಾ ಜುಮಾ ಮಸೀದಿಯಲ್ಲಿ ಜರಗುವ ಕಾರ್ಯಕ್ರಮವನ್ನು ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಮರ್ ಫಾರೂಕ್ ಸಖಾಫಿ ಉದ್ಘಾಟಿಸುವರು. ಸಯ್ಯದ್ ಶಿಹಾಬ್ ತಂಙಳ್ ಅಲ್ ಬುಖಾರಿ ಕಿನ್ಯ ದುಆಗೈಯುವರು. 7ನೇ ಬ್ಲಾಕ್ ಕೃಷ್ಣಾಪುರದ ಮುಸ್ಲಿಂ ಜಮಾಅತ್ ಖಾಝಿ ಅಲ್ಹಾಜ್ ಇ.ಕೆ.ಇಬ್ರಾಹೀಂ ಮದನಿ ನಿಕಾಅ್ ನೇತೃತ್ವ ವಹಿಸುವರು. ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಬಿ.ಎಂ.ಹುಸೈನ್ ಅಧ್ಯಕ್ಷತೆ ವಹಿಸುವರು.
ಕೃಷ್ಣಾಪುರ ಈದ್ಗಾ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಹಸನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡುವರು.
ಮುಖ್ಯ ಅತಿಥಿಗಳಾಗಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮ್‌ನ ಸುರತ್ಕಲ್ ರೇಂಜ್ ಅಧ್ಯಕ್ಷ ಹಬೀಬುರ್ರಹ್ಮಾನ್ ಸಖಾಫಿ, ರಫೀಕ್ ದಾರಿಮಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪಂಪ್‌ವೆಲ್‌ನ ಪ್ರ.ಕಾರ್ಯದರ್ಶಿ ಅಲ್ಹಾಜ್ ಬಿ.ಎಂ.ಮುಮ್ತಾಝ್ ಅಲಿ, ಅಲ್ ಕೃಷ್ಣಾಪುರ ಬದ್ರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅಧ್ಯಕ್ಷ ಅಬೂಬಕರ್ ಎನ್‌ಎಂಪಿಟಿ, ಈದ್ಗಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಸಾದಿಕ್ ಎನ್., ಲಜಿನತುಲ್ ಅನ್ಸಾರಿಯಾ ಯಂಗ್‌ಮೆನ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಹಾಜಿ ಝಾಕಿರ್ ಹುಸೈನ್ ಟು ಸ್ಟಾರ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.