ಅಲ್ ಬದ್ರಿಯಾ ಎಜ್ಯುಕೇಶನಲ್ ಅಸೋಸಿಯೇಶನ್ ಅಧ್ಯಕ್ಷರಾಗಿ ಬಿ.ಎ.ನಝೀರ್ ಆಯ್ಕೆ
Update: 2018-04-27 21:54 IST
ಸುರತ್ಕಲ್, ಎ.27: ಕೃಷ್ಣಾಪುರದ ಅಲ್ ಬದ್ರಿಯಾ ಎಜ್ಯುಕೇಶನಲ್ ಅಸೋಸಿಯೇಶನ್‌ನ 2018-19ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಬಿ.ಎ.ನಝೀರ್ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಉಪಾಧ್ಯಕ್ಷರಾಗಿ ಹಕೀಂ ಫಾಲ್ಕನ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎ.ಇಕ್ಬಾಲ್, ಕರೆಸ್ಪಾಂಡೆಂಟ್ ಆಗಿ ಬಿ.ಕೆ.ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿಯಾಗಿ ಫಿರೋಝ್ ಖಾನ್, ಖಜಾಂಚಿಯಾಗಿ ಮುಹಮ್ಮದ್ ಅಲಿ ತೋಟ ಹಾಗೂ 25 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.