ಗಾಝಾದಲ್ಲಿ ಅಧಿಕ ಬಲಪ್ರಯೋಗ ನಿಲ್ಲಿಸಿ: ಇಸ್ರೇಲ್‌ಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಕರೆ

Update: 2018-04-27 16:49 GMT

ಜಿನೇವ, ಎ. 27: ಗಾಝಾದಲ್ಲಿ ತನ್ನ ಪಡೆಗಳು ಮಾಡುತ್ತಿರುವ ಅಧಿಕ ಬಲಪ್ರಯೋಗವನ್ನು ಇಸ್ರೇಲ್ ನಿಲ್ಲಿಸಬೇಕು ಹಾಗೂ ಕಳೆದ ತಿಂಗಳು ಸಂಭವಿಸಿದ ಫೆಲೆಸ್ತೀನೀಯರ ಸಾವು-ನೋವುಗಳಿಗೆ ಕಾರಣರಾದವರನ್ನು ಅದಕ್ಕೆ ಉತ್ತರದಾಯಿಯನ್ನಾಗಿಸಬೇಕು ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯ ಮುಖ್ಯಸ್ಥ ಝೈದ್ ರಅದ್ ಅಲ್-ಹುಸೈನ್ ಶುಕ್ರವಾರ ಹೇಳಿದ್ದಾರೆ.

ಕಳೆದ ನಾಲ್ಕು ವಾರಗಳ ಅವಧಿಯಲ್ಲಿ ಗಾಝಾ ಗಡಿಯಲ್ಲಿ 42 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಹಾಗೂ 5,500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಪ್ರಾಣ ಹಾನಿ ದುಃಖದಾಯಕ ಹಾಗೂ ಭಾರೀ ಸಂಖ್ಯೆಯಲ್ಲಿ ಜನರು ಗಾಯಗೊಂಡಿರುವುದು ಇಸ್ರೇಲ್ ಪಡೆಗಳು ಪ್ರತಿಭಟನಕಾರರ ವಿರುದ್ಧ, ಒಂದಲ್ಲ, ಎರಡಲ್ಲ, ಹಲವಾರು ಬಾರಿ ಅಧಿಕ ಬಲ ಪ್ರಯೋಗ ಮಾಡಿವೆ ಎನ್ನುವುದನ್ನು ಖಚಿತಪಡಿಸುತ್ತದೆ’’ ಎಂದು ಝೈದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News